Thursday, October 24, 2024

ಪ್ರಾಯೋಗಿಕ ಆವೃತ್ತಿ

ಹೆಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿಗೆ ವಿರುದ್ದವಾಗಿ ಕೆಲಸ ಮಾಡಲು ಸಾಧ್ಯವೇ ?

ಬೆಂಗಳೂರಿನಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಎನ್’ಜಿಇಎಫ್, ಎಚ್ಎಂಟಿ, ಐಟಿಐ ನಂತಹ ಹಲವು ಉದ್ಯಮಗಳು ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಆಸರೆಯಾಗಿದ್ದವು. ಈ ಸಂಸ್ಥೆಗಳಿಗೆ ಕಾಯಕಲ್ಪ ನೀಡಿ ಪುನರುಜ್ಜೀವನ ಮಾಡುವುದು ನನ್ನ ಆಸೆಯಾಗಿದೆ. ಆದರೆ ರಾಜ್ಯ ಸರಕಾರ ಈ ಉದ್ದಿಮೆಗಳ ಆಸ್ತಿಯಿಂದ ಬರುವ ಲಾಭದ ಮೇಲೆ ಕಣ್ಣಿಟ್ಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಗಾದರೆ, ಕೇಂದ್ರ ಸರ್ಕಾರದ ಕೈಗಾರಿಕಾ ಪಾಲಿಸಿ ಏನು ಹೇಳುತ್ತದೆ? ಮೋದಿಜಿ ಅವರ ಡಿಸ್ಇನ್ವೆಸ್ಟ್ ಮೆಂಟ್ ಸಚಿವಾಲಯ ಏನು ಹೇಳುತ್ತದೆ? ಭಾರತದ ದೊಡ್ಡ ದೊಡ್ಡ ಸಾರ್ವಜನಿಕ ರಂಗದ ಉದ್ದಿಮೆಗಳಾದ ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು ಎಲ್ಲವನ್ನೂ ಖಾಸಗೀಕರಣ ಮಾಡಿರುವ, ಮಾಡುತ್ತಿರುವ ಬಗ್ಗೆ ಕುಮಾರಸ್ವಾಮಿ ಅವರು ಏನು ಹೇಳುತ್ತಾರೆ.

ನಿಜವಾಗಿಯೂ ಕುಮಾರಸ್ವಾಮಿ ಅವರು ಖಾಸಗೀಕರಣದ ವಿರುದ್ದ ಇದ್ದಾರೆಯೇ ಅಥವಾ ಕೇವಲ ರಾಜಕೀಯ ಕಾರಣಗಳಿಗಾಗಿ ರಾಜ್ಯ ಸರ್ಕಾರದ ಕಾಲೆಳೆಯಲು ಮಾತ್ರ, ಈ ಹೇಳಿಕೆ ನೀಡಿದ್ದಾರೆಯೇ ಎನ್ನುವ ಚರ್ಚೆ ಕೈಗಾರಿಕಾ ಮತ್ತು ಕಾರ್ಮಿಕ ವಲಯದಲ್ಲಿ ಪ್ರಾರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!