Friday, October 18, 2024

ಪ್ರಾಯೋಗಿಕ ಆವೃತ್ತಿ

ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೋಬೋಟ್ !

ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಶ್ವಾದ್ಯಂತ ಚರ್ಚೆ ಹುಟ್ಟುಹಾಕಿದೆ.

ದಕ್ಷಿಣ ಕೊರಿಯಾದ ಗುಮಿ ನಗರ ಪಾಲಿಕೆಯಲ್ಲಿ ಜೂನ್ 26 ರಂದು, ಆಡಳಿತಾತ್ಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬೋರ್ಗ್ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಆರೂವರೆ ಅಡಿ ಎತ್ತರದ ಮೆಟ್ಟಿಲಿನಿಂದ ರೋಬೋಟ್‌ ಜಿಗಿದಿದೆ ಎನ್ನಲಾಗಿದ್ದು, ಪ್ರಾಣ ಕಳೆದುಕೊಳ್ಳುವ ಮುನ್ನ ಯಂತ್ರ ಮಾನವ ಗೊಂದಲಕ್ಕೆ ಒಳಗಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೋಬೋಟ್ ಅನ್ನು 2023ರ ಆಗಸ್ಟ್‌ನಲ್ಲಿ ಗುಮಿ ನಗರ ಪಾಲಿಕೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿಸಿರುವ ಅಧಿಕಾರಿಗಳು, ರೋಬೋಟ್‌ನ ಚದುರಿದ ತುಣುಕುಗಳನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗೆ ಕಳುಹಿಸಿಕೊಟ್ಟಿದ್ದಾರೆ.

ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಕಂಪನಿಯು ಈ ರೋಬೋವನ್ನು ತಯಾರಿಸಿತ್ತು. ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಆಹಾರ ಪೂರೈಸಲು ರೋಬೋಟ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸರ್ಕಾರಿ ಸಂಸ್ಥೆಗೆ ರೋಬೋಟ್ ಅನ್ನು ಆಡಳಿತಾತ್ಮಕ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೋಬೋಟ್ ತುಂಬಾ ಕ್ರಿಯಾಶೀಲತೆಯನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ನಿರಂತರವಾಗಿ ದಾಖಲೆಗಳ ವಿತರಣೆಗೆ ಸಹಾಯ, ಮಾಹಿತಿ ವಿತರಣೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಕೊರಿಯಾ ರೋಬೋಟ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲಿ ಬೇರೆಲ್ಲೂ ಇರದಷ್ಟು ರೋಬೋಟ್‌ಗಳು ಇಲ್ಲಿವೆ. ಪ್ರತಿ ಹತ್ತು ಉದ್ಯೋಗಿಗಳಿಗೆ ಒಂದು ರೋಬೋಟ್ ಲಭ್ಯವಿದೆ ಎಂದು ಇಂಟರ್‌ನ್ಯಾಷನಲ್‌ ಫೆಡರೇಶನ್ ಆಫ್ ರೋಬೋಟಿಕ್ಸ್ ಬಹಿರಂಗಪಡಿಸಿದೆ. ಆದರೆ ರೋಬೋಟ್ ಕೆಲಸದ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ತಂತ್ರಜ್ಞಾನ ಪರಿಣಿತರಲ್ಲಿರೋಬೋಟ್ ಆತ್ಮಹತ್ಯೆ ಅಚ್ಚರಿ ಮೂಡಿಸಿದೆ. ಚರ್ಚೆಯ ವಸ್ತುವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!