Friday, September 20, 2024

ಪ್ರಾಯೋಗಿಕ ಆವೃತ್ತಿ

ಕೇರಳ | ರಬ್ಬರ್ ತೋಟದಲ್ಲಿ ಚಿನ್ನ-ಬೆಳ್ಳಿ ನಾಣ್ಯಗಳ ನಿಧಿ ಪತ್ತೆ

ಮಹಿಳಾ ಕಾರ್ಮಿಕರು ಕೃಷಿ ಹೊಂಡ ಅಗೆಯುವಾಗ ಭಾರೀ ಪ್ರಮಾಣದ ನಿಧಿ ಪತ್ತೆಯಾದ ಘಟನೆ ಕೇರಳದ ಚೆಂಗಲಾಯಿಯ ಖಾಸಗಿ ರಬ್ಬರ್ ತೋಟದಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಮಹಿಳಾ ಕಾರ್ಮಿಕರು ಬಾಂಬ್ ಎಂದು ಭಾವಿಸಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗಿತ್ತು. ಅದಾದ ಬಳಿಕ ಮಾಟ ಮಂತ್ರ ಮಾಡಿರಬಹುದು ಎಂದು ಭಯಪಟ್ಟಿದ್ದರು. ಆದರೆ ಭಯ ಬಿಟ್ಟು ಧೈರ್ಯದಿಂದ ತೆರೆದು ನೋಡಿದಾಗ ಮಹಿಳೆಯರಿಗೆ ನಿಧಿ ಪತ್ತೆಯಾಗಿದೆ.

ಪಾತ್ರೆ ತುಂಬಾ ಆಭರಣಗಳು ಮತ್ತು ಹಳೆಯ ನಾಣ್ಯಗಳು ತುಂಬಿದ್ದವು. ಇದು ಅತೀ ಅಧಿಕ ಮೌಲ್ಯದ ಆಭರಣಗಳು ಎಂದು ಹೇಳಲಾಗಿದೆ. ಪುರಾತತ್ವ ಇಲಾಖೆಯಿಂದ ವಿವರವಾದ ಪರೀಕ್ಷೆಯ ನಂತರವೇ ಇದರ ಮೌಲ್ಯ ಮತ್ತು ಪ್ರಾಚೀನತೆ ತಿಳಿದು ಬರಲಿದೆ. ಆದರೆ ಇದನ್ನು ಸ್ಥಳೀಯರು ಅಮೂಲ್ಯವಾದ ನಿಧಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ನಿಧಿಯನ್ನು ಸಂಗ್ರಹಿಸಿದ್ದಾರೆ. ನಂತರ, ಅವರು ಆಭರಣಗಳು ಮತ್ತು ನಾಣ್ಯಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.

“ನಾವು ಕೃಷಿ ಹೊಂಡ ಅಗೆಯುತ್ತಿರುವಾಗ ಹೊಂಡದೊಳಗೆ ಏನೋ ಹೊಳೆಯುತ್ತಿರುವುದನ್ನು ನೋಡಿದೆವು. ಅದು ಹಳೆಯ ಪಾತ್ರೆಯಾಗಿತ್ತು. ನಾವು ಮೊದಲು ಅದನ್ನು ಬಾಂಬ್ ಎಂದು ಭಾವಿಸಿದ್ದೇವು. ನಂತರ ಇದು ಯಾವುದೋ ಮಾಟ ಮಂತ್ರ ಎಂದು ಅನುಮಾನಿಸಿದೆ. ಆದರೆ, ಆಶ್ಚರ್ಯಕರವಾಗಿ, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು, ಅಮೂಲ್ಯವಾದ ಮಣಿಗಳು, ಲಾಕೆಟ್‌ಗಳು ಮೊದಲಾದವುಗಳು ಅದರಲ್ಲಿ ಇದ್ದವು” ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

“ನಾವು ಈಗಾಗಲೇ ಸಂಶೋಧನೆಯ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಿದ್ದೇವೆ. ಈ ಪ್ರದೇಶದಲ್ಲಿ ಹೆಚ್ಚಿನ ಹುಡುಕಾಟ ನಡೆಸುವುದು ಅವರಿಗೆ ಬಿಟ್ಟದ್ದು. ಅವರ ಪರೀಕ್ಷೆಯು ಪತ್ತೆಯಾದ ನಿಧಿಯ ಪ್ರಾಚೀನತೆಯನ್ನು ಬಹಿರಂಗಪಡಿಸುತ್ತದೆ” ಎಂದು ತಿಳಿಸಿದರು.

ಈ ನಡುವೆ ಶನಿವಾರ ಬೆಳಿಗ್ಗೆ ಅದೇ ಆಸ್ತಿಯಲ್ಲಿ ಇನ್ನೂ ಮೂರು ಬೆಳ್ಳಿ ನಾಣ್ಯಗಳು ಮತ್ತು ಚಿನ್ನದ ಮಣಿಗಳು ಪತ್ತೆಯಾಗಿವೆ ಎಂದು ಸ್ಥಳೀಯರು ಸೇರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!