Thursday, September 19, 2024

ಪ್ರಾಯೋಗಿಕ ಆವೃತ್ತಿ

ಐತಿಹಾಸಿಕ ಸ್ಮಾರಕಗಳ ರಕ್ಷಣೆ ನಮ್ಮ ಹೊಣೆ: ಡಾ. ಸುಜಯ ಕುಮಾರ್

ಶ್ರೀರಂಗಪಟ್ಟಣ ಇತ್ತೀಚೆಗಷ್ಟೇ ಪತ್ತೆಯಾದ ಜೋಡಿ ನೆಲಮಾಳಿಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಪಟ್ಟಣದ ಹಿರಿಯ ಗಾಂಧಿವಾದಿಗಳದ ಡಾ.ಬಿ ಸುಜಯ ಕುಮಾರ್, ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕ ಸಂರಕ್ಷಣೆ ಆಗದ್ದಿದರೆ ಮುಂದಿನ ಪೀಳಿಗೆ ಅದರ ಅವಶೇಷಗಳು ದೊರಕದಂತಾಗುತ್ತದೆ, ಹಾಗಾಗಿ ಸ್ಮಾರಕ ಸಂರಕ್ಷಣೆ ನಮ್ಮ ಹೊಣೆಯಾಗಿದೆ ಎಂದು ಅಚಿವರ್ಸ್ ಅಕಾಡೆಮಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀರಂಗ ಪಟ್ಟಣದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಈಗಾಗಲೇ ಕೆಲವೇ ಸ್ಮಾರಕ ಸಂರಕ್ಷಣೆ ಮುಂದಾಗಿದು ಇನ್ನು ಇತರ ಭಾಗಗಳ ಅಭಿವೃದ್ದಿಗೆ ಪುರಾತತ್ವ ಇಲಾಖೆಯು ತತ್ ಕ್ಷಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಇಲಾಖೆಗೆ ಹಕ್ಕೊತ್ತಾಯ ಮಾಡುವುದಾಗಿ ಶ್ರೀರಂಗ ಪಟ್ಟಣದ ಪ್ರಜ್ಞಾವಂತರ ವೇದಿಕೆಯ ಸಂಚಾಲಕ ವಕೀಲ ಸಿ ಎಸ್ ವೆಂಕಟೇಶ್ ತಿಳಿಸಿದರು.

ಇತ್ತೀಚಿಗಷ್ಟೇ ಪಟ್ಟಣದಲ್ಲಿ ಪತ್ತೆಯಾದ ಜೋಡಿ ನೆಲಮಾಳಿಗೆಗಳ ಸುತ್ತುವರಿದ ಗಿಡ ಮರಗಳನ್ನು ತೆರವು ಮಾಡಿ ಪ್ರವಾಸಿಗರು ಭೇಟಿ ನೀಡವ ಉದ್ದೇಶ ದಿಂದ ಪಾತ್ ವೇ ನಿರ್ಮಾಣ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಆಚಿವರ್ಸ್ ಅಕಾಡೆಮಿಯ ಅಧ್ಯಕ್ಷ ಡಾ ರಾಘವೇಂದ್ರ ತಿಳಿಸಿದರು.

ಸ್ವಚ್ಚತಾ ಕಾರ್ಯಕ್ರಮದಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಅಚೀವ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಮಾನಸ, ವಿದ್ಯಾ, ಯಶಸ್ವಿನಿ,ಪವಿತ್ರ,ಚರಣ್ ಸಿಂಗ್, ನಿತಿನ್ ಕೃಷ್ಣ, ಹರ್ಷ, ದರ್ಶನ್ ಗೌಡ. ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಚಿಕ್ಕತಮ್ಮೇಗೌಡ ಇತರರು ಸ್ವಚ್ಚತಾ ಕಾರ್ಯಕ್ರಮದಲಿ ಬಾಗವಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!