Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ರೇಷ್ಮೆಹುಳು ಸಾಕಾಣಿಕೆ ಮನೆ ಸಹಾಯಧನ ವಿತರಣೆಗೆ ಒತ್ತಾಯ

ಮಳವಳ್ಳಿ ತಾಲ್ಲೂಕಿನಲ್ಲಿ ರೇಷ್ಮೆ ಇಲಾಖೆಯ ಯೋಜನೆಯಡಿ ರೈತರು ನಿರ್ಮಾಣ ಮಾಡಿರುವ “ರೇಷ್ಮೆ ಹುಳು ಸಾಕಾಣಿಕೆ ಮನೆ” ಗೆ ಸಹಾಯಧನವನ್ನು 2 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆ ಆರ್ ಎಸ್) ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.

ರೇಷ್ಮೆ ಇಲಾಖೆಯ ಅಧಿಕಾರಿ ಸುರೇಶ್ ಮಾತನಾಡಿ, ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ತೊಂದರೆಯಿಂದ ಈ ರೀತಿ ಸಮಸ್ಯೆ ಆಗಿದೆ ಎಂದರು. ಇದಕ್ಕೆ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು, 15 ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಗಡುವು ನೀಡಿದ್ದರು.  ಈ ಸಮಸ್ಯೆ ಬಗೆಹರಿಸದಿದ್ದರೆ ಈ ಇಲಾಖೆ ಮುಂದೆ ರೈತರ ಜೊತೆ ಸೇರಿ ಧರಣಿ ಕೂರಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಣಕೊಳದ ರೈತರಾದ ಮಹದೇವಯ್ಯ, ನಾಗರಾಜು, ಕೆ ಆರ್ ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕೆಜೆ, ಮಳವಳ್ಳಿ ಅಧ್ಯಕ್ಷ ಮಾದೇಗೌಡ ಎ ಎನ್, ಉಪಾಧ್ಯಕ್ಷ ಪರಮೇಶ್ವರ್ ಸಿ, ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್ ಎಮ್, ಕಾರ್ಯದರ್ಶಿಯಾದ ವಿಷಕಂಠಮೂರ್ತಿ, ರಾವಣಿ ಮೂರ್ತಿ ಹಾಗೂ ಮದ್ದೂರು ಅಧ್ಯಕ್ಷ ಪ್ರಮೋದ್ ಎಸ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!