Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಡಾ, ವಾಲ್ಮೀಕಿ ನಿಗಮದ ಹಣ ದುರುಪಯೋಗ: ನಿಖಿಲ್ ಕುಮಾರಸ್ವಾಮಿ

ಮುಡಾ , ವಾಲ್ಮೀಕಿ ನಿಗಮದಲ್ಲಿ ಅಭಿವೃದ್ಧಿ ಹಣವನ್ನ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಮುಡಾಗೆ ಸಂಬಂಧಿಸಿದಂತೆ ಸುಳ್ಳುದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮದ್ದೂರಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಟುಂಬದವರು 14ಸೈಟ್ ಗಳನ್ನ ಪಡೆದುಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಇಬ್ಬರು ನಾಯಕರು ಪಾದಾಯಾತ್ರೆಗೆ ಚಾಲನೆ ಕೊಟ್ಟಿದ್ದಾರೆ. ಕೆಂಗಲ್ ನಿಂದ ನಿನ್ನೆ ನಿಡಘಟ್ಟಕ್ಕೆ ಬಂದಿದ್ದೇವೆ.
ಮದ್ದೂರಿನ ಟಿಬಿ ಸರ್ಕಲ್ ನಲ್ಲಿ‌ ದೊಡ್ಡ ಸಭೆಯಿದೆ. ರೈತರು, ಸಂಘಟನೆಗಳು ನಮಗೆ ಸಾಥ್ ನೀಡಲಿವೆ.
ನಿನ್ನೆ ಪಕ್ಷದ ಕಾರ್ಯಕರ್ತೆ ಗೌರಮ್ಮ ಎನ್ನೊವವರು ಹೃದಯಾಘಾತದಿಂದ ಮೃತಪಟ್ಟಿರೋದು ಮನಸ್ಸಿಗೆ ನೋವಾಗಿದೆ ಎಂದರು.

ಎರಡು ಪಕ್ಷದ ಕಾರ್ಯಕರ್ತರು ಪ್ರತಿದಿನ ನಮ್ಮ ಜೊತೆ ಹೆಜ್ಜೆ ಹಾಕ್ತಿದ್ದಾರೆ. ಯಾದಗಿರಿಯಲ್ಲಿ ಪಿಎಸ್ ಐ 40 ಲಕ್ಷ ವರ್ಗಾವಣೆಗೆ ಶಾಸಕರು ಹಾಗು ಅವರ ಮಗನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಶುರಾಮ್ ಅವರ ಪತ್ನಿ ಜೊತೆ ಕುಮಾರಸ್ವಾಮಿ ದೂರವಾಣಿ ಮಾತಾಡಿದ್ದಾರೆ. ಪಾದಾಯಾತ್ರೆ ಮುಗಿದ ಬಳಿಕ ಅಲ್ಲಿಗೆ ಹೋಗಿ ಅವರಿಗೆ ನ್ಯಾಯ‌ ಕೊಡಿಸಲು ಹೋರಾಟ ಮಾಡಲಾಗುವುದು ಎಂದರು.

ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಹಗರಣ ಕಪ್ಪು ಚುಕ್ಕೆ‌ಯಾಗಿದೆ.
ಇವರ ಆಡಳಿತದಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದೆ. ವಾಲ್ಮಿಕಿ ನಿಗಮದ ಅಧಿಕಾರಿ ಚಂದ್ರಶೇಖರ ಅವರ ಡೆಟ್ ನೋಟಿನಲ್ಲಿ ಸಚಿವರ ಹೆಸರಿತ್ತು. ಕಾಂಗ್ರೆಸ್ ಭ್ರಷ್ಟಾಚಾರ ರಕ್ಷಣೆ ಮಾಡ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸುರ್ಜೆವಾಲ ವೇಣುಗೋಪಾಲ ಅವರನ್ನ ಕಳಿಸಿ. ಸಿದ್ದರಾಮಯ್ಯ ಅವರನ್ನ ಇಳಿಸಿ ಇಲ್ಲಾ ಕಿಕ್ ಬ್ಯಾಕ್ ಕೊಡಿ ಅಂತ ಕೇಳ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಲ್ ಪಿಸುರೇಶ್ ಬಾಬು , ಮಾಜಿ ಸಚಿವ ಪುಟ್ಟರಾಜು, ಡಿಸಿ ತಮ್ಮಣ್ಣ, ಎಂಎಲ್ ಸಿ ಬೋಜೆಗೌಡ, ಡಾ.ಇಂದ್ರೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!