Tuesday, October 22, 2024

ಪ್ರಾಯೋಗಿಕ ಆವೃತ್ತಿ

ರೈತ ಬದುಕು ಹಸನಾಗಲು ಹೋರಾಟ ಅತ್ಯವಶ್ಯಕ: ನಿಂಗರಾಜ್‌ಗೌಡ

ನಾಡು ನುಡಿ ಮತ್ತು ರೈತ ಬದುಕು ಹಸನಾಗಲು ಹೋರಾಟ ಅತ್ಯವಶ್ಯಕ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ, ಕದಂಬ ಮಯೂರ ವರ್ಮ ಚಾಲುಕ್ಯ ಇಮ್ಮಡಿ ಪುಲಿಕೇಶಿ ಪುತ್ಧಳಿ ಹೋರಾಟ ಸಮಿತಿ ಆಯೋಜಿಸಿದ್ದ “ಕರುನಾಡ ಉತ್ಸವ ಕದಂಬ ಚಾಲುಕ್ಯ ವೈಭವ ಸಿಹಿ ನೆನೆಪು” ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪಸ್ತುತ ದಿನಗಳಲ್ಲಿ ಕಾವೇರಿ-ಮಹದಾಯಿ ಹೋರಾಟಗಳು ಪ್ರಚಲಿತ ವಿದ್ಯಮಾನದಲ್ಲಿ ಸಂಚಲನ ಸೃಷ್ಠಿಸುತ್ತಿವೆ, ಇಂತಹ ಹೋರಾಟದ ನಡುವೆ ರೈತ ಸಮುದಾಯ ನೈಸರ್ಗಿಕ ಕೃಷಿ ಪದ್ದತಿ ಅನುರಿಸಬೇಕಿದೆ ಎಂದು ನುಡಿದರು.

ಇತ್ತೀಚಿಗೆ ಕೃಷಿ ಪದ್ದತಿಯಲ್ಲಿ ಇಳುವರಿ ಹೆಚ್ಚಳ ಮಾಡಿಕೊಳ್ಳಲು ರಾಸಾಯನಿಕ ವಸ್ತುಗಳ ಗೊಬ್ಬರ ಬಳಕೆ ಮಾಡಿ ಹಲವಾರು ಕಾಯಿಲೆಗಳನ್ನು ಆಹ್ವಾನಿಸುತ್ತಿದ್ದೇವೆ, ಮನೆ ಮನೆಗೂ ಕ್ಯಾನ್ಸರ್‌ನಂತಹ ದೊಡ್ಡ ದೊಡ್ಡ ಕಾಯಿಲೆಗಳನ್ನು ತರುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪುಷ್ಪವೃಷ್ಠಿಯೊಂದಿಗೆ “ಕದಂಬ ಮಯೂರ ವರ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಗುರು ಗಪೂರ ತಾತ, ಅಬ್ಬಿಗೇರಿ ಮಠ ಪೀಠಾಧ್ಯಕ್ಷ ಡಾ.ಬಸವರಾಜ ಶರಣ, ಕದಂಸ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಡಾ.ಭಾಷ್ಯಂ, ಕಳಸಬಂಡೂರಿ ಮಹದಾಯಿ ಹೋರಾಟಗಾರರಾದ ಹನಮಪ್ಪ ಸಂಗಪ್ಪ ಮಡಿವಾಳರ, ವಕೀಲ ರಮೇಶ್ ರಾ.ನಾಯ್ಕರ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!