Thursday, September 19, 2024

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್ ಆಫ್ ಬರೋಡ ಸ್ವ-ಉದ್ಯೋಗ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಮಂಡ್ಯ ನಗರದ ಕೆಎಚ್ ಬಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಗ ಗುರುಗಳಾಗಿ ಆರ್ಟ್ ಆಫ್ ಲಿವಿಂಗ್ ನಲ್ಲಿ ಹಿರಿಯ ಶಿಕ್ಷಕರಾಗಿರುವ ವೆಂಕಟೇಶ್ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

ಯೋಗ ಎಂಬುದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಚೈತನ್ಯ ತುಂಬುವ ಏಕೈಕ ವ್ಯಾಯಾಮ. ಯೋಗ ಇಂದು ಪ್ರಪಂಚದಾದ್ಯಂತ ಆವರಿಸಿದೆ. ಇದು ನಮ್ಮ ಭಾರತದ ಸನಾತನ ಪರಂಪರೆ, ಸಂಸ್ಕೃತಿ ಮತ್ತು ಸಂಸ್ಕಾರದ ರೂಪಕವಾಗಿದೆ. ಮನುಷ್ಯನ ಶಾಂತ ಸ್ವಭಾವ, ಒಳ್ಳೆಯ ಆಲೋಚನೆಗಳಿಗೆ, ಮನಸಿನ ನಿಯಂತ್ರಣಕ್ಕೆ ಮೂಲ ಬುನಾದಿ ಯೋಗ ಮತ್ತು ಧ್ಯಾನ ಎಂದು ತಿಳಿಸಿದರು.

ಯೋಗ ನಮ್ಮ ದೇಹವನ್ನು ಸದೃಢವಾಗಿಸಿದರೆ, ಧ್ಯಾನ ನಮ್ಮನ್ನು ಮಾನಸಿಕವಾಗಿ ಸಾತ್ವಿಕಗೊಳಿಸಿ ಸದೃಢವಾಗಿಸುತ್ತದೆ. ಯೋಗಾಸನಗಳಲ್ಲಿನ ವಿವಿಧ ಆಸನಗಳನ್ನು ಬ್ಯಾಂಕ್ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳಿಂದ ಮಾಡಿಸಿದ ಅವರು ಪ್ರಾಣಾಯಾಮದ ಸರಿಯಾದ ಕ್ರಮಗಳನ್ನು ತಿಳಿಸಿಕೊಟ್ಟರು, ಒಟ್ಟಾರೆಯಾಗಿ ಆರೋಗ್ಯವೇ ಭಾಗ್ಯ ಎಂದು ತಿಳಿಸಿದ ಅವರು ಪ್ರತಿನಿತ್ಯ ಯೋಗ ಮಾಡಿ ರೋಗಗಳಿಂದ ದೂರ ಇರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಕವಿತಾ, ಶ್ರೀಯುತ ಚಿರಂಜೀವಿ, ಬ್ಯಾಂಕ್ ಆಫ್ ಬರೋಡದ ಉಪ ಪ್ರಾದೇಶಿಕ ವ್ಯವಸ್ಥಾಪಕ ಸತುವ ಸನಾತನ, ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ನಿರ್ದೇಶಕ ವಿವೇಕ್ ವಿ, ಪುರಂದರ ಚಿತ್ರಾಪುರ ಹಾಗೂ ಸಂಸ್ಥೆಯ ಶಿಬಿರಾರ್ಥಿಗಳು ಮತ್ತು ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!