Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಗರಸಭೆ ನಿರ್ಲಕ್ಷ್ಯ ; ಬಾಗಿಲು ಮುಚ್ಚಿದ ಸಾರ್ವಜನಿಕ ಶೌಚಾಲಯ

ಮಂಡ್ಯ ನಗರಸಭೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾವಿರಾರು ಜನರಿಗೆ ಪ್ರತಿನಿತ್ಯ ಉಪಯೋಗವಾಗಬೇಕಿದ್ದ ಸಾರ್ವಜನಿಕ ಶೌಚಾಲಯ ಬಾಗಿಲು ಮುಚ್ಚಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ಶ್ರೀಸಾಮಾನ್ಯರು ಈ ಭಾಗದಲ್ಲಿ ಸಾರ್ವಜನಿಕರು ಶೌಚಾಲಯವಿಲ್ಲದೇ ಪರದಾಡುವಂತಾಗಿದೆ.

ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಪಕ್ಕದಲ್ಲೆ ಇರುವ ಸಾರ್ವಜನಿಕ ಶೌಚಾಲಯ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯ ನಗರಸಭೆ ಅಧಿಕಾರಿಗಳಿಗೆ ಬೇಜಾವಾಬ್ದಾರಿಯಿಂದ ಸಾರ್ವಜನಿಕರ ಸೇವೆಗೆ ಸಲ್ಲದಂತಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿನಿತ್ಯ ಹೆಚ್ಚಿನ ಸಾರ್ವಜನಕ ದಟ್ಟಣೆ ಇರುತ್ತದೆ, ಅಲ್ಲದೇ ಪ್ರತಿನಿತ್ಯ ಒಂದಲ್ಲ ಒಂದು ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ, ಅಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲದೇ ಪರದಾಟುವಂತಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿಯೇ ಇರುವ ಸಾರ್ವಜನಿಕರಿಗೆ ಶೌಚಾಲಯ ಉಪಯೋಗಕ್ಕೆ ಸಲ್ಲದಿರುವುದರಿಂದ ಜಿಲ್ಲಾಡಳಿತದ ವಿರುದ್ದ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.

ನಗರಸಭೆಯ ಆಡಳಿತ ಕೆಟ್ಟು ನಿಂತಿದೆಯೇ

ಜಿಲ್ಲೆದ್ಯಾಂತ ದಿನ ನಿತ್ಯ ಸಾವಿರಾರು ಜನರು ಬಂದುಹೋಗುವ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಒಂದು ಶೌಚಾಲಯವನ್ನು ನಿರ್ವಹಣೆ ಮಾಡದಷ್ಟು ನಗರಸಭೆಯ ಆಡಳಿತ ಕೆಟ್ಟು ನಿಂತಿದೆಯೇ, ಇಲ್ಲಿಗೆ ಪ್ರತಿನಿತ್ಯ ಬರುವ ಸಾರ್ವಜನಿಕರು ಶೌಚಾಲಯವಿಲ್ಲದೇ ಪರದಾಟುವಂತಾಗಿದೆ. ಕೂಡಲೇ ಮಂಡ್ಯ ಜಿಲ್ಲಾಡಳಿತ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯವನ್ನು ಸಿದ್ದಗೊಳಿಸಬೇಕೆಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!