Friday, October 25, 2024

ಪ್ರಾಯೋಗಿಕ ಆವೃತ್ತಿ

ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಸರಿಯಲ್ಲ: ಚಲುವರಾಯಸ್ವಾಮಿ

ಕ್ಯಾಬಿನೆಟ್ ನಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಮಾಡ್ತೇವೆ. ಸಮಾಜದವರು ಮನವಿ ಕೊಟ್ಟಿದ್ದಾರೆ ಚರ್ಚೆ ಮಾಡುತ್ತೇವೆ, ಇದಕ್ಕೆ ವಿರೋಧ ಸರಿಯಲ್ಲ ಎಂದು ಕೃ‍ಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ  ಮತ್ತು ಡಿಸಿಎಂ ಜೊತೆ ಚರ್ಚೆ ಮಾತ್ತೇವೆ,
ಸಾರ್ವಜನಿಕ, ರಾಜ್ಯದ ಹಿತದೃಷ್ಟಿಯಿಂದ ಚರ್ಚೆ ಮಾಡಿ ಬಹುಮತದ ತೀರ್ಮಾನ ಕೊಡ್ತಾರೆ.
ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ಸಬ್ ಕಮಿಟಿ ಮಾಡುವ ಪರಿಸ್ಥಿತಿ ಬರಬಹುದು

ಜಾತಿಗಣತಿಯನ್ನ ರಾಜಕೀಯವಾಗಿ ಚರ್ಚೆ ಮಾಡ್ತಿದ್ದಾರೆ. ನಾನು ಒಬ್ಬ ಒಕ್ಕಲಿಗ ನಾಯಕನಾಗಿ ಹೇಳ್ತೆನೆ.
ವೀರಶೈವ, ಒಕ್ಕಲಿಗ ಸಂಘ ಸಂಸ್ಥೆಗಳು ಇದನ್ನ ಬೇಡ ಅಂತಿದ್ದಾರೆ. ಜಾತಿಗಣತಿ ಸಬ್ ಮಿಟ್ ಮಾಡಿದ್ದಾರೆ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತೆ. ನಂತರ ತಪ್ಪಿದ್ದರೆ ಸರಿ ಪಡಿಸಲಾಗುತ್ತೆ. ಸಬ್ ಕಮಿಟಿ ಮಾಡುವ ಪರಿಸ್ಥಿತಿ ಬರಬಹುದು ಎಂದು ಅಭಿಪ್ರಾಯಪಟ್ಟರು.

ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿ ದಲಿತ ಮುಖ್ಯಮಂತ್ರಿ ಆಗೋದು, ವೀರಶೈವ, ಒಕ್ಕಲಿಗರಲ್ಲಿ ಆಗಿದ್ರೆ ಅದು ಕಾಂಗ್ರೆಸ್ ನಿಂದ ಮಾತ್ರ.
ಬಿಜೆಪಿ-ಜೆಡಿಎಸ್ ನವರು ಮಾಡೋಕಾಗುತ್ತಾ? ಎಂದು ಪ್ರಶ್ನಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!