ಡಿಸೆಂಬರ್ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಆರ್.ಪೇಟೆ ಪಟ್ಟಣಕ್ಕೆ ಭೇಟಿ ಆಗಮಿಸುತ್ತಿದ್ದು ಕಸಬಾ ಸೊಸೈಟಿ ವತಿಯಿಂದ ನಿರ್ಮಿಸಿರುವ ಕೆ.ಎನ್. ಕೆಂಗೇಗೌಡ ರೈತ ಸಭಾಭವನದ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ್ ತಿಳಿಸಿದರು.
ಕೃಷ್ಣರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಕೆ.ಎನ್. ಕೆಂಗೇಗೌಡ ರೈತ ಸಭಾ ಭವನದ ಕಟ್ಟಡದ ಉದ್ಘಾಟನೆ ಸಮಾರಂಭವು ಡಿಸೇಂಬರ್ 4ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿಯ ಸರದಾರ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಬ್ಯಾಂಕಿಂಗ್ ಶಾಖೆಯನ್ನು ಉದ್ಘಾಟಿಸಿದರೆ, ಟಿಎಪಿಸಿಎಂ ಎಸ್ ಅಧ್ಯಕ್ಷ ಬಿ. ಎಲ್. ದೇವರಾಜು ಗೊಬ್ಬರದ ಶಾಖೆಯನ್ನು ಉದ್ಘಾಟನೆ ಮಾಡುವರು. ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಶಾಸಕ ಹೆಚ್. ಟಿ.ಮಂಜು ಸಹಕಾರ ಧ್ವಜಾರೋಹಣ ನೆರವೇರಿಸುವರು.
ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿದರೆ, ರಾಜ್ಯದ ಮಾಜಿ ಸಚಿವರಾದ ಡಾ.ನಾರಾಯಣಗೌಡ ಸಂಘದ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸುವರು. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ರೈತರಿಗೆ ಬೆಳೆ ಸಾಲ ವಿತರಿಸಿದರೆ, ಉಪಾಧ್ಯಕ್ಷ ಹೆಚ್. ಕೆ.ಅಶೋಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಚೆಕ್ ನೀಡುವರು. ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಆದ ನಾನು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದೇನೆ ಎಂದು ತಿಳಿಸಿದ ಅವರು ತಾಲೂಕಿನ ಸಹಕಾರಿ ಬಂಧುಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ಪುರುಷೋತ್ತಮ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಸಂಘದ ಉಪಾಧ್ಯಕ್ಷೆ ಶೋಭಾ ಬಸವರಾಜು, ಸಂಘದ ಸಿಈಓ ಬಿ.ಎನ್.ಕಾಂತರಾಜು, ವೃತ್ತ ಮೇಲ್ವಿಚಾರಕರಾದ ಆದಿಲ್ ಪಾಷ, ರಾಘವೇಂದ್ರ, ಜಲೆಂದ್ರ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಎಸ್. ಚಂದ್ರು, ಜವರೇಗೌಡ, ಚಕ್ರಪಾಣಿ, ಕೆ.ಎನ್. ಕಾಳೇಗೌಡ, ಚಂದ್ರಶೇಖರ್, ಸಿ. ಜೆ.ಮಂಜೇಗೌಡ, ಬಲರಾಮೇಗೌಡ, ರಾಜನಾಯಕ, ರಾಜಯ್ಯ ಹಾಗೂ ಕೆ.ಆರ್.ರಘು ಉಪಸ್ಥಿತರಿದ್ದರು.




