ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ಮೂಲಕ ಮಂಡ್ಯ ಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ (ಶಿವರಾಮೇಗೌಡ ಬಣ) ಮಂಡ್ಯ ಜಿಲ್ಲಾಡಳಿತ ಹಾಗೂ ಸಾಹಿತ್ಯ ಸಮ್ಮೇಳನ ಸಂಘಟಕರನ್ನು ಒತ್ತಾಯಿಸಿದೆ.
ಕನ್ನಡನಾಡು ನುಡಿಯ ಹಬ್ಬ ಎಂದೆ ಖ್ಯಾತಿ ಪಡೆದಿರುವ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮಗೆಲ್ಲ ಹರ್ಷ ತಂದಿದೆ. ಅದರಂತೆ ಸಂವಿಧಾನದ ಆರ್ಟಿಕಲ್ 51A(H) ಆಧಾರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮಾಂಸಾಹಾರ ಮತ್ತು ಸಸ್ಯಾಹಾರ ಎರಡು ಬಗೆಯ ಆಹಾರವನ್ನು ಈ ಸಮ್ಮೇಳನದಲ್ಲಿ ನೀಡುವ ಮೂಲವಕ ಮಾಂಸಾಹಾರದ ಬಗ್ಗೆ ಇರುವ ತಾರತಮ್ಯವನ್ನು ತೊಡೆದು ಹಾಕಬೇಕೆಂದು ಆಗ್ರಹಿಸಿ ಮಂಡ್ಯ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆನಂತರ ಆಹಾರ ಸಮಿತಿ ಅಧ್ಯಕ್ಷ ಶ್ರೀರಂಗಪಟ್ಟಣ ಶಾಸಕರ ಕಚೇರಿಗೂ ಕೂಡ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಹೆಚ್ ಡಿ ಜಯರಾಂ, ಮನು ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.




