Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ‘ಸೃಜನಿ’ಯ ಚಿತ್ರಕಲೆಗೆ ಪೊಲೀಸ್ ವರಿಷ್ಟಾಧಿಕಾರಿ ಮೆಚ್ಚುಗೆ

ಮಂಡ್ಯನಗರದ ಕಲ್ಲಹಳ್ಳಿಯಲ್ಲಿ ಚಿತ್ರ ಕಲಾವಿದ ಸೋಮವರದ ಅವರ ಮಗಳು 7 ವರ್ಷದ ‘ಸೃಜನಿ’ಯ ಏಕವ್ಯಕ್ತಿ ಕಲಾಪ್ರದರ್ಶನವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪುಟ್ಟ ಚಿತ್ರಕಲಾವಿದೆಯ ಚಿತ್ರಕೃಷಿಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.

ಮುಂಜಾನೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಅವರೊಂದಿಗೆ ಕಲ್ಲಹಳ್ಳಿಯ “ಪುಟ್ಟಹೆಜ್ಜೆ” ನಿಲಯಕ್ಕೆ ಹಾಜರಾದ ಅವರು, ಸೃಜನಿಯ ಚಿತ್ರಕಲೆಯನ್ನು ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದರು.

ಈ ಸಂದರ್ಭದಲ್ಲಿ ಡ್ರಾಯಿಂಗ್ ಪೆನ್ ಹಿಡಿದು ಚಿಟ್ಟೆಯ ಚಿತ್ತಾರವನ್ನು ರಚಿಸುವ ಮೂಲಕ ತಮ್ಮ ಚಿತ್ರಕಲೆಯನ್ನು ಅಭಿವ್ಯಕ್ತಿಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾವಿದ ಸೋಮುವರದ ಹಾಗೂ ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ