Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೊಳ್ಳೇಗಾಲ ಬಳಿ ಭೀಕರ ಅಪಘಾತ | ಮಂಡ್ಯದ ಮೂವರು ಸೇರಿ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಇಂದು ಬೆಳಿಗ್ಗೆ 9.30ರ ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಮೀಪದ ಚಿಕ್ಕಿಂದುವಾಡಿ ಬಳಿ ನಡೆದ ಕಾರು ಹಾಗೂ ಟಿಪ್ಪರ್ ನಡುವಿನ ಭೀಕರ ಅಪಘಾತದಲ್ಲಿ ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿದಂತೆ ಮೈಸೂರಿನ ಎಂಐಟಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಅವರ ಮಾಹಿತಿ ಈಗ ಲಭ್ಯವಾಗಿದೆ.

ಈ ದುರ್ಘಟನೆಯಲ್ಲಿ ಮಂಡ್ಯ ಜಿಲ್ಲೆಯವರಾದ ಹಲ್ಲೆಗೆರೆ ಗ್ರಾಮದ ಶ್ರೇಯಸ್(23), ಲಕ್ಷ್ಮೆಗೌಡನದೊಡ್ಡಿಯ ನಿತಿನ್(22), ಮಂಡ್ಯ ನಗರದ ಹೊಸಹಳ್ಳಿಯ ಸುಹಾಸ್(21), ಮೈಸೂರಿನ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮೈಸೂರಿನ ನಿಖಿತಾ( 22) ಹಾಗೂ ಶ್ರೀಲಕ್ಷ್ಮಿ (23) ಸಾವಿಗೀಡಾದವರು.

ಮೃತ ಐವರು ವಿದ್ಯಾರ್ಥಿಗಳು ಇಂದು ಮುಂಜಾನೆಯೇ ಕಾರಿನಲ್ಲಿ ಮೈಸೂರಿನಿಂದ ಕೊಳ್ಳೇಗಾಲ ಹನೂರು ಮಾರ್ಗವಾಗಿ ಮಲೈಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಕೊಳ್ಳೇಗಾಲದಿಂದ ಮುಂದೆ ಮಧುವನಹಳ್ಳಿ ದಾಟಿಕೊಂಡು ಚಿಕ್ಕಿಂದುವಾಡಿ ಮಾರ್ಗದಲ್ಲಿ ಹೊರಟಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಏಕಾಏಕಿ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರು.

ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ