Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ ಯಶಸ್ವಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ, ಜಿಲ್ಲಾ ಸಂಸ್ಥೆ ಮಂಡ್ಯ ಹಾಗೂ ಮಂಡ್ಯ ತಾಲೂಕು ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆ ಬೇಲೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾ.20ರಿಂದ ಏ.9ವರೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು.

ಸುಮಾರು 140 ಮಕ್ಕಳು ಈ ಬೇಸಿಗೆ ಶಿಬಿರದ ಉಪಯೋಗವನ್ನು ಪಡೆದುಕೊಂಡರು. ರಾಜ್ಯ ಸಂಸ್ಥೆ ನೀಡಿದ ಪಠ್ಯಕ್ರಮದಂತೆ ಮಕ್ಕಳನ್ನು ಮೂರು ಬ್ಯಾಚ್ ಗಳನ್ನಾಗಿ ಮಾಡಿ ತರಬೇತಿಯನ್ನ ನೀಡಲಾಯಿತು.

ಶಿಬಿರದ ಕೊನೆಯ ದಿನ ಶಿಬಿರಾಗ್ನಿ ಕಾರ್ಯಕ್ರಮವನ್ನು ಶಾಲೆಯ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಉಮೇಶ್ ಬಿಕೆ ಅವರು ಉದ್ಘಾಟಿಸಿ ಶಿಬಿರದ ಸದುಪಯೋಗವನ್ನ ಪಡೆದುಕೊಂಡ ಮಕ್ಕಳಿಗೆ ಹಿತನುಡಿಗಳನ್ನು ನುಡಿದರು. ಈ ಶಿಬಿರದಿಂದ ಅತ್ಯುತ್ತಮ ಪ್ರಯೋಜನ ದೊರೆಯಲಿದೆ. ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಬಾಳಲು ಈ ಶಿಬಿರ ಉಪಯೋಗವಾಗಿದೆ ಎಂದರು.

2024ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಆಯೋಜಿಸುವ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಂಟು ಮಕ್ಕಳಿಗೆ ಅಭಿನಂದನಾ ನುಡಿಗಳನ್ನು ನುಡಿದರು. ಈ ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ಬೇಲೂರು ಸರ್ಕಾರಿ ಪ್ರೌಢಶಾಲೆಯ ಗೈಡ್ ಕ್ಯಾಪ್ಟನ್ ಉಷಾರಾಣಿ  ವಹಿಸಿಕೊಂಡಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ ಕೆಎಂ ಶಿಬಿರದಲ್ಲಿ ಪ್ರತಿದಿನ ಮಕ್ಕಳಿಗೆ ಹಿತವಚನವನ್ನು ಹೇಳಿ ಪ್ರೋತ್ಸಾಹ ನೀಡಿದರು. ಶಿಬಿರದಲ್ಲಿ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ರೋವರ್ ರೇಂಜರ್ಸ್ ಮಕ್ಕಳು ಭಾಗವಹಿಸಿದ್ದರು. ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಗತಿಗಳನ್ನ ಕೊಡಲಾಯಿತು. ಹೊರ ಸಂಚಾರಕ್ಕಾಗಿ ಮೇಲುಕೋಟೆಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗಿತ್ತು. ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಮಕ್ಕಳು ಪೋಷಕರು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ