ಮಂಡ್ಯ ತಾಲ್ಲೂಕಿನ ಮರಿಲಿಂಗೇಗೌಡನ ದೊಡ್ಡಿ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರಿ ಲಾವಣ್ಯ ಎಂಬುವವರನ್ನು ಮದುವೆಯಾಗುವಂತೆ ಒತ್ತಾಯಿಸಿ ಬ್ಲಾಕ್ ಮೇಲ್ ಮಾಡಿ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಚಿಕ್ಕಬಳ್ಳಿ ಬಾಲು ಎಂಬಾತನ ಮೇಲೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 22 ರಂದೇ ಚಿಕ್ಕಬಳ್ಳಿ ಬಾಲು ವಿರುದ್ದ ಎಫ್ಐಆರ್ ದಾಖಲಾಗಿದ್ದರೂ, ಆರೋಪಿಯ ವಿರುದ್ದ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ನೊಂದ ಯುವತಿ ಲಾವಣ್ಯ, ಸೋಮವಾರ ಮಿಮ್ಸ್ ಆವರಣದಲ್ಲಿ ಮಂಡ್ಯ ಶಾಸಕ ರವಿಕುಮಾರ್ ಅವರನ್ನು ಭೇಟಿ ಮಾಡಿ, ಅಳಲು ತೋಡಿಕೊಂಡರು.
ಹಿಂದೂ ಸಂಘಟನೆಯ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ಎಂಬುವವನು ಕೊಲೆ ಮಾಡುವ ಅಥವಾ ಆಸಿಡ್ ಹಾಕುವ ಬೆದರಿಕೆ ಹಾಕುತ್ತಿದ್ದು, ನನಗೆ ಮತ್ತು ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಸಂಬಂಧಿಸಿದ ಶಾಸಕ ರವಿಕುಮಾರ್ ಅವರು ಪೊಲೀಸ್ ವರಿಷ್ಟಾಧಿಕಾರಿಯನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಿದರು. ತರುವಾಯ ಮಾತನಾಡಿದ ಶಾಸಕರು, ಯುವತಿ ನನ್ನ ಸಹೋದರಿ ಸಮಾನಳಾಗಿದ್ದು, ಯುವತಿಯ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಎಫ್ಐಆರ್ ನಲ್ಲೇನಿದೆ ?





