Thursday, November 19, 2026

ಪ್ರಾಯೋಗಿಕ ಆವೃತ್ತಿ

ಸರ್ವಧರ್ಮದ ಜನರನ್ನು ಸಮ ಭಾವನೆಯಿಂದ ಕಂಡ ಆಡಳಿತಗಾರ ಕೆಂಪೇಗೌಡ ; ನರೇಂದ್ರಸ್ವಾಮಿ

ನಾಡಿನ ಭವಿಷ್ಯದ ದೂರ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ತಂದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಇದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಆವಣದಲ್ಲಿ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ 516 ನೇ ಕೆಂಪೇಗೌಡ ಜಯಂತಿ ಅಂಗವಾಗಿ ನಡೆದ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು ನಾ ಪ್ರಭು ಕೆಂಪೇಗೌಡರು ಸರ್ವಧರ್ಮ ಮತ್ತು ಜಾತಿ ಜನ ಜನರನ್ನು ಸಮ ಭಾವನೆಯಿಂದ ಕಂಡ ಅಪರೂಪದ ಆಡಳಿತಗಾರ. ನಾಡಿನಾದ್ಯಂತ ವಿಶೇಷ ರೀತಿಯಲ್ಲಿ ಜಯಂತಿಯನ್ನು ಆಚರಿಸಲಾಗುತ್ತಿದ್ದು ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ನಂತರ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ 516 ನೇ ಕೆಂಪೇಗೌಡ ಜಯಂತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯದ ಜನರ ಆರ್ಥಿಕ ಮಟ್ಟನು ಸುಧಾರಿಸಲು ಬೇಟೆಗಳನ್ನು ನಿರ್ಮಿಸಿದರು ಜಾನುವಾರು ಗಳಿಗೆ ಕೆರೆಕಟ್ಟುಗಳನ್ನು ನಿರ್ಮಿಸಿ ಮಾದರಿ ರಾಜ್ಯವನ್ನಾಗಿ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಮತ್ತು ಎಸ್ ಎಸ್ ಎಲ್ ಸಿ ಪಿಯುಸಿ ಎಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಲೋಕೇಶ್.ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್. ಮನ್ ಮುಲ್ ನಿರ್ದೇಶಕರಾದ ವಿಶ್ವಾಸ್ ಕೃಷ್ಣೇಗೌಡ.ಪುರಸಭೆ ಉಪಾಧ್ಯಕ್ಷ ಬಸವರಾಜು ಸದಸ್ಯರಾದ ಸಿದ್ದರಾಜು. ನೂರುಲ್ಲಾ.ಪ್ರಶಾಂತ್ ಬಸವರಾಜು. ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ. ತಾಲೂಕು ಅಧ್ಯಕ್ಷ ಮಾದೇಶ್ ಒಕ್ಕಲಿಗರ ಸಂಘದ ಅಧ್ಯಕ್ಷ ನಾಗೇಶ್. ಮುಖಂಡರಾದ ಚಿಕ್ಕರಾಜು. ಅಂಬರೀಶ್. ಶಿವ ಮಾದೇಗೌಡ. ಸಿಪಿ ರಾಜು ಪುಟ್ಟಸ್ವಾಮಿ. ಪ್ರಭುಲಿಂಗು. ಚೌಡಪ್ಪ ದೇವರಾಜು ಕೆಂಪರಾಜು. ಮೂರ್ತಿ ಸುಜಾತ.ಕೆ.ಪುಟ್ಟು. ಸು ಷ್ಮರಾಜು. ಸವಿತಾ.ಸೌಮ್ಯ ಜಯ ರಾಜು ಸೇರಿದಂತೆ ಇತರರು ಇದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ