Thursday, September 19, 2024

ಪ್ರಾಯೋಗಿಕ ಆವೃತ್ತಿ

ದುಷ್ಟಶಕ್ತಿಗಳಿಂದ ರಕ್ಷಿಸುತ್ತಿರುವ ಯೋಧರ ನೆನೆಯೋಣ

ನಮ್ಮ ದೇಶವನ್ನು ದುಷ್ಟ ಶಕ್ತಿಗಳಿಂದ ರಕ್ಷಣೆ ಮಾಡುತ್ತಿರುವ ಭಾರತೀಯ ಯೋಧರನ್ನು ನಾವೆಲ್ಲ ನೆನೆಯಬೇಕು ಎಂದು ತಹಶೀಲ್ದಾರ್ ಕುಂಇ ಅಹಮದ್ ತಿಳಿಸಿದರು.

ಮಂಡ್ಯ ನಗರದ ವಿವಿ ರಸ್ತೆಯಲ್ಲಿ ಜೀವಧಾರೆ ಟ್ರಸ್ಟ್ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಕಂಟಕವಾಗಿರುವ ಹಲವಾರು ವಿದೇಶಿ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡಿ ನಾವು ನಿರ್ಭಯವಾಗಿ ದೇಶದ ಎಲ್ಲೆಡೆ ಸಂಚರಿಸುವಂತೆ ಮಾಡಿರುವ ಭಾರತೀಯ ಯೋಧರನ್ನು ಎಂದಿಗೂ ಮರೆಯುವುದು ಸಾಧ್ಯವಿಲ್ಲ. ಜೈ ಜವಾನ್ ಎಂದು ಸೈನಿಕರು ದೇಶ ಕಾಯುತ್ತಾರೆ. ಜೈ ಕಿಸಾನ್ ಎಂದು ರೈತರು ನಮಗೆ ಅನ್ನ ನೀಡುತ್ತಾರೆ ಎಂದರು. ಇವರಿಬ್ಬರನ್ನು ಎಂದಿಗೂ ಮರೆಯಬಾರದು ಎಂದರು.

ಭಾರತೀಯ ಸೇನೆಗೆ ಅತಿ ಹೆಚ್ಚು ಸೈನಿಕರನ್ನು ನೀಡಿದ ರಾಜ್ಯ ಪಂಜಾಬ್ ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ರ್ನಾಟಕದ ಕೊಡಗು ಜಿಲ್ಲೆಗೆ ಸಲ್ಲುತ್ತದೆ. ನನ್ನ ದೇಹದಲ್ಲಿ ಸೈನಿಕನ ಕುಟುಂಬದ ರಕ್ತ ಹರಿಯುತ್ತಿದೆ. ನಾನೂ ಕೂಡ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದುಷ್ಟರನ್ನು ಮಟ್ಟಹಾಕಿದ್ದೇನೆ. ನಂತರ ತಹಶೀಲ್ದಾರ್ ಆಗಿದ್ದೇನೆ.

ಪ್ರತಿಯೊಬ್ಬ ಭಾರತೀಯರು ಜುಲೈ 26, 1999ರ ಕಾರ್ಗಿಲ್ ವಿಜಯೋತ್ಸವದ ದಿನ ಹೆಮ್ಮೆ ಪಡುವ ದಿನವಾಗಿದೆ. ನಾವು ನಮ್ಮ ಸೈನಿಕರನ್ನು ಎಂದೆಂದಿಗೂ ನೆನಪಿಸಿಕೊಳ್ಳೋಣ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಶಾಂತಿ ಕೋರೋಣ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಬಿಎಸ್ಎಫ್ ಯೋಧರಾದ ಚೇತನ್ ಹಾಗೂ ಲಿಂಗರಾಜು ಅವರನ್ನು ಜೀವಧಾರೆ ಟ್ರಸ್ಟ್ ಸದಸ್ಯರು ಗೌರವಿಸಿಸಿದರು.

ಈ ಸಂದರ್ಭದಲ್ಲಿ ಡಾ. ರವಿಕುಮಾರ್, ಯುವ ಮುಖಂಡ ಬೇಲೂರು ಸೋಮಶೇಖರ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜ್, ಹನುಮೇಶ್, ಪ್ರಶಾಂತ್, ದೀಪು,ತರುಣ್, ಅನಂತ್, ಸಚಿನ್, ಚಂದ್ರು, ಬಿಜೆಪಿ ಮುಖಂಡರಾದ ವರದರಾಜ್, ಹೊಸಳ್ಳಿ ಶಿವು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!