Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೊಳೆಗೇರಿ ನಿವಾಸಿಗಳಿಗೆ ನಿವೇಶನ : ಶ್ರಮಿಕರಿಂದ ಹಕ್ಕೊತ್ತಾಯ ಪ್ರತಿಭಟನೆ

ಮಂಡ್ಯನಗರದ ವಿವಿಧ ಶ್ರಮಿಕನಗರ (ಸ್ಲಂ)ಗಳಲ್ಲಿ ನಿವೇಶನ ರಹಿತವಾಗಿ ವಾಸಿಸುತ್ತಿರುವ ಶ್ರಮಿಕರಿಗೆ ಮೂಲ ಸೌಲಭ್ಯಗಳೊಂದಿಗೆ ನಿವೇಶನಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಭೂಮಿ ಮತ್ತು ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನೂರಾರು ಶ್ರಮಿಕರಿಂದ ಹಕ್ಕೊತ್ತಾಯ ಪ್ರತಿಭಟನೆ ನಡೆಯಿತು.

ಮಂಡ್ಯನಗರ ಸಂಜಯ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಹೊರಟ ಶ್ರಮಿಕರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಹಕ್ಕೊತ್ತಾಯಗಳೇನು ? 

1.ಕಾಳಪ್ಪ ಬಡಾವಣೆ, ಗುರುಮಠ, ನ್ಯೂತಮಿಳು ಕಾಲೋನಿ, ಕಾಳಿಕಾಂಬ, ನಾಲಬಂದವಾಡಿ, ಎಸ್.ಡಿ.ಜಯರಾಂ ಬಡಾವಣೆ, ಹೊನ್ನಯ್ಯ ಬಡಾವಣೆ, ಮದ್ದೂರು ತಮಿಳು ಕಾಲೋನಿ, ಮಂಡ್ಯ ಜಿಲ್ಲಾ ಆಸ್ಪತ್ರೆ, ತಮಿಳು ಕಾಲೋನಿ, ಶ್ರಮಿಕ ನಗರಗಳಲ್ಲಿ ಸಂಘಟನೆಯು ಸರ್ವೇ ನಡೆಸಿ ಹಲವು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸ ಇದ್ದು, ಹಾಗೂ ಹೊಸ ಸಂಸಾರಗಳು, ಒಂದೇ ಕುಟುಂಬದಲ್ಲಿ 2 + 3 ಕುಟುಂಬಗಳು ಹೆಚ್ಚುವರಿಯಾಗಿ ವಾಸ ಮಾಡುತ್ತಿದ್ದು, ಒಟ್ಟು 200 ಕುಟುಂಬಗಳಷ್ಟು ನಿವೇಶನ ವಂಚಿತರಾಗಿದ್ದು, ಮಂಡ್ಯದ ಸುತ್ತಲಳತೆಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು 6 ಎಕರೆ ಜಾಗ ಮೀಸಲಿಟ್ಟು, ತುರ್ತು ಕ್ರಮಕೈಗೊಂಡು ಜಿಲ್ಲಾಡಳಿತ ಹಾಗೂ ಶಾಸಕರು ಹಂಚಿಕೆ ಮಾಡಲು ಮುಂದಾಗಬೇಕೆಂದು ನೀವೇಶನ ವಂಚಿತರ ಮನವಿ ಹಾಗೂ ಒತ್ತಾಯ ಫಲಾನುಭವಿಗಳ ಪಟ್ಟಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ.

2. ಲ್ಯಾಂಡ್ ಆರ್ಮಿ ಸ್ಲಂ ಪ್ರದೇಶದಲ್ಲಿ 70 ಕ್ಕೂ ಹೆಚ್ಚು ಕುಟುಂಬಗಳು, ಕಳೆದ 60 ವರ್ಷಗಳಿಂದ ವಾಸ ಮಾಡುತ್ತಿದ್ದರು. ಘೋಷಣೆ ಮಾಡದೆ, ಯಾವ ಸೌಲಭ್ಯಗಳನ್ನು ಪಡೆಯಲಾಗದೆ ವಂಚಿತರಾಗಿದ್ದು, ಈ ವಿಚಾರವನ್ನು ಕೇಂದ್ರಿಕರಿಸಿ. ಈ ಸ್ಲಂ ವಿಚಾರವನ್ನು ಶಾಶ್ವತವಾಗಿ ಬಗೆಹರಿಸಲು ಮುಂದಾಗಿ, ಹಕ್ಕುಪತ್ರ ಹಾಗೂ ವಸತಿಗಳನ್ನು ನೀಡಬೇಕು.

3.ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಮಾದೇವಪುರ ಬೋರೆಯ ಅಲೆಮಾರಿ ಹಕ್ಕಿ ಪಿಕ್ಕಿ ಸಮುದಾಯದ ಸುಮಾರು 74 ಕುಟುಂಬಗಳು ವಾಸಿಸುತ್ತಿದ್ದು, 45 ಜನರಿಗೆ ಹಕ್ಕುಪತ್ರ ನೀಡಿದ್ದು, ಉಳಿಕೆ 29 ಕುಟುಂಬಗಳ ದಾಖಲೆಗಳನ್ನು ಪಡೆದು 30 + 40 ರಂತೆ ನೀವೇಶನ ಹಂಚಿಕೆ ಮಾಡಿ ವಸತಿ ಜೊತೆ ಎಲ್ಲಾ ರೀತಿಯ ಮೂಲಭೂತ ಹಕ್ಕುಗಳನ್ನು ತಕ್ಷಣ ನೀಡಲೇಬೇಕು.

4. ಮದ್ದೂರು ತಮಿಳು ಕಾಲೋನಿ ಜನರಿಗೆ ಜಿಲ್ಲಾಡಳಿತ ನೀಡಿರುವ 3 ಎಕರೆ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ತೆರವುಗೊಳಿಸಿ, ತಕ್ಷಣವೇ ಸ್ಥಳವನ್ನು ಅಭಿವೃದ್ಧಿ ಪಡಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ, ನಿವೇಶನ ಹಂಚಿಕೆ ಮಾಡಿ, ಮೂಲಭೂತ ಸೌಲಭ್ಯಗಳೊಂದಿಗೆ ವಸತಿ ಯೋಜನೆ ಕಲ್ಪಿಸಬೇಕು.

5. ಮಂಡ್ಯದ ನ್ಯೂ ತಮಿಳು ಕಾಲೋನಿ ನಿವಾಸಿಗಳಿಗೆ 2.5 (SCPS, TSP) ರ ಅಡಿಯಲ್ಲಿ ಉಚಿತವಾಗಿ ಖಾತೆ ಮಾಡಲು ಹಾಗೂ ಬೀದಿ ರಸ್ತೆ, ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿ ಒಳಚರಂಡಿ ಕುಡಿಯುವ ನೀರಿನ ಪೈಪ್‌ ಲೈನ್, ಅಂಗನವಾಡಿ ದುರಸ್ಥಿ ಕಾಮಗಾರಿಗಳನ್ನು ತುರ್ತು ಆಗಿ ಮಾಡಲು ಕ್ರಮ ಕೈಗೊಳ್ಳಬೇಕು.

6.ಕಾಳಿಕಾಂಭ ಶ್ರಮಿಕ ಜನವರಿಗೆ ಸರ್ವೇ ನಂ.845 ರ ಜಾಗವನ್ನು ಆಕ್ರಮವಾಗಿ ಕಾಳಿಕಾಂಭಸೇವಾ ಸಂಸ್ಥೆಯವರು ಕಬಳಿಸಿದ್ದು. ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡದೆ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಮತ್ತೆ ಕೋರ್ಟ್ ಮುಖಾಂತರ ಹೋಗಿ ಸಮಯವನ್ನು ಹಾಳು ಮಾಡುತ್ತಿದ್ದಾರೆ. ನೆಪಕ್ಕೆ ಒಪ್ಪಂದ ಮಾಡಿ ಕೊಂಡು, ಅವರಿಗೆ ಸೇರಿದ್ದ ಜಾಗವನ್ನು ನಮಗೆ ಕೊಡುವ ರೀತಿ ಕೊಟ್ಟು ಬೆನ್ನಿಗೆ ಚೂರಿ ಹಾಕಿ ನಮ್ಮ ಬದುಕನ್ನು ನಾಶ ಮಾಡುತ್ತಿದ್ದಾರಲ್ಲದೆ, ಅವರೆ ನೀಡಿರುವ ಸರ್ವೇ ನಂಬರ್ 843, 844 ರ 0.20.00 ಗುಂಟೆ ಜಾಗಕ್ಕೆ ಕೇಸ್ ದಾಖಲಿಸಿರುವುದು. ಜನರಿಗೆ ಮಾಡಿರುವ ವಂಚನೆ, ಹೈಕೋರ್ಟ್ ತೀರ್ಪು ಜನರ ಪರವಾಗಿ ಬಂದಿದ್ದರು, ಜನರಿಗೆ (RAY) ಯೋಜನೆಯ ಮನೆಗಳನ್ನು ಸಹ ನಿರ್ಮಾಣ ಮಾಡದ ಹಾಗೇ ವಂಚನೆ ಏಸಗಿರುವುದು ಮಂಡ್ಯ ಜನತೆಗೆ ಗೊತ್ತಿದೆ. ನೂತನ ಶಾಸಕರ ಉಪಸ್ಥಿತಿಯಲ್ಲಿ ಸಂಸ್ಥೆಯ ಮುಖ್ಯಸ್ಥರ ಜೊತೆ ಸಭೆ ಮಾಡಿದ್ದರು. ಫಲ ನೀಡಲಿಲ್ಲ. ಎನ್ನುವುದು ಗೊತ್ತಿದೆ. ಶೀಘ್ರದಲ್ಲೇ ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡದೆ ಹೋದರೆ ನಮ್ಮ ಜಾಗಕ್ಕೆ ನಾವು ಹೋಗುತ್ತೇವೆ. ನಮ್ಮ ಜನಗಳ ಮೇಲೆ, ಸಣ್ಣ ಗೇರೆ ಬಿದ್ದರು. ಕಾಂಗ್ರೆಸ್ ಸರ್ಕಾರ, ಹಾಗೂ ಶಾಸಕರು ಮತ್ತು ಜಿಲ್ಲಾಡಳಿತ ಕಾಳಿಕಾಂಭ ಸೇವಾ ಸಂಸ್ಥೆಯವರೆ ನೇರ ಹೊಣೆ ಹೊರಬೇಕಾಗಿರುತ್ತದೆ.

7. ಗಾಡಿ ಕಾರ್ಖಾನೆ ಹಾಗೂ ಶ್ರಮಿಕ ನಗರ ಪ್ರದೇಶವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯವರು ನಗರಸಭೆ ವ್ಯಾಪ್ತಿಗೆ ಸೇರಿಸಿ ಕೊಳ್ಳಲು ಪತ್ರ ಬರೆದಿದ್ದು, ನಗರಸಭೆ ತನ್ನ ವ್ಯಾಪ್ತಿಗೆ ಪಡೆದುಕೊಂಡಿಲ್ಲ ಕೂಡಲೇ ಪಡೆದುಕೊಂಡು ಎಲ್ಲಾ ಕುಟುಂಬಗಳಿಗೆ ಕಂದಾಯ ಕಟ್ಟಿಸಿಕೊಂಡು ಖಾತೆ ಮಾಡಿಕೊಡಬೇಕು.

8. ಸ್ಲಾಟ‌ರ್ ಹೌಸ್‌ನ 5 ಕುಟುಂಬಗಳಿಗೆ, ಪರ್ಯಾಯ ನಿವೇಶನವನ್ನು ಶ್ರಮಿಕ ನಗರ ಗಾಡಿ ಕಾರ್ಖನೆಯಲ್ಲಿರುವ ಉಳಿದಿರುವ 8 ನಿವೇಶನಗಳ ಪೈಕಿ ಸ್ಲಾಟರ್‌ಹೌಸ್‌ನ 5 ಕುಟುಂಬಗಳಿಗೆ ನಿವೇಶನ ನೀಡಬೇಕು ಮತ್ತು ಉಳಿಕೆ 60 ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ವೇ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಪರಿಚಯ ಪತ್ರ ನೀಡಿ ನಂತರ ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು.

9. ಕಾಳಪ್ಪ ಬಡಾವಣೆಗೆ, ಹಕ್ಕುಪತ್ರ ವಿತರಿಸಿ, ವಸತಿ ನಿರ್ಮಾಣ ಮಾಡಿ, ಫಲಾನುಭವಿಗಳ ಹೆಸರಿಗೆ ಖಾತೆ, ಮಾಡಿಸಿ ಕೊಡಬೇಕು.

10. ಹೊಸಹಳ್ಳಿ ಗುರುಮಠ ಶ್ರಮಿಕ ನಗರದ 75 ಕುಟುಂಬಗಳು ವಾಸ ಮಾಡುತ್ತಿರುವ ಘೋಷಿತ ಕೊಳಚೆ ಪ್ರದೇಶದ ಜಾಗವನ್ನು ಸರ್ಕಾರಿ ಕಟ್ಟೆ ಎಂದು ಇರುವುದನ್ನು ರದ್ದುಪಡಿಸಿ ಜನವಸತಿ ಪ್ರದೇಶವಾಗಿರುವುದರಿಂದ ಮರು ಘೋಷಣೆ ಮಾಡಲು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, 8 ತಿಂಗಳೆ ಕಳೆದಿದೆ. ಈ ವಿಚಾರವಾಗಿ ಮರು ಘೋಷಣೆ ಮಾಡಿ ಜನರಿಗೆ ಹಕ್ಕುಪತ್ರಗಳನ್ನು ನೀಡದೆ ಕೊಳಗೇಡಿ ಅಭಿವೃದ್ಧಿ ಮಂಡಳಿಯವರ ನಿರ್ಲಕ್ಷ್ಯದಿಂದ ನೆನೆಗುದ್ದಿಗೆ ಬಿದ್ದಿದೆ.

11. ಇಂದಿರಾ ಬಡಾವಣೆಯಲ್ಲಿ 80 ವರ್ಷಗಳು ಕಳೆದಿದ್ದರು. 128 ಕ್ಕೂ ಹೆಚ್ಚು ಕುಟುಂಬಗಳು ಸೌಲಭ್ಯಗಳಿಂದ ವಂಚಿತರಾಗಿದ್ದು, ಇರುವ ಸ್ಥಳದಲ್ಲೇ ವಸತಿ ಯೋಜನೆ ರೂಪಿಸಲು ಮುಂದಾಗ ಬೇಕು. ಹಕ್ಕು ಪತ್ರ ವಿತರಣೆ ಮಾಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯ.

12. ಹಾಲಹಳ್ಳಿ, ಶ್ರಮಿಕ ನಗರದಲ್ಲಿ 80 ಮನೆಗಳ ಕಾಮಗಾರಿಗೆ ತಕ್ಷಣ ಚಾಲನೆ ಕೊಡಬೇಕು, ಹಲವು ಕುಟುಂಬಗಳು, ಬಾಡಿಗೆ ಮನೆಗಳಲ್ಲಿ ದುಬಾರಿ ಬಾಡಿಗೆ ಕೊಟ್ಟು ವಾಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕ ಸಮುದಾಯವರಿಗೂ ಸಂಪೂರ್ಣ ವಸತಿ ಹಂಚಿಕೆ ಮಾಡಿಲ್ಲದಿರುವುದು. ಹಾಗೂ ಅಲ್ಪಸಂಖ್ಯಾತ ಕುಟುಂಬಗಳು ಸೇರಿದಂತೆ, ಬೇರೆ ವರ್ಗದ ಕುಟುಂಬಗಳಿಗೂ ವಸತಿ ಹಂಚಿಕೆ ಮಾಡದೆ ಇರುವುದು ಕಂಡು ಬಂದಿದ್ದು, ಕೂಡಲೇ 80 ಮನೆ ನಿರ್ಮಿಸಿ ಉಳಿದವರಿಗೆ ಹಂಚಿಕೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ನಮ್ಮ ಸಂಘಟನೆಯ ಆಶಯ. ಇಷ್ಟು ಹಕ್ಕೊತ್ತಾಯಗಳನ್ನು 3 ತಿಂಗಳಲ್ಲಿ ಬಗೆಹರಿಸಲು, ಶ್ರಮ ಜೀವಿಗಳ ಹಕ್ಕೊತ್ತಾಯ ಸಮಾವೇಶದಲ್ಲಿ ನಿರ್ಣಯ ಮಾಡಲಾಯಿತು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು, ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಮಹಿಳಾ ಮುನ್ನಡೆಯ ಶಿಲ್ಪಾ ಬಿ.ಎಸ್., ಮುಖಂಡರಾದ ವೈದುನ, ನಾಗರತ್ಮಮ್ಮ, ಚಂದ್ರಶೇಖರ್ ಹಾಗೂ ರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಪಹಾರ ಸವಿದು ಶ್ರಮಿಕರು ಹೋರಾಟ ನಡೆಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ