ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಪ್ರಮುಖ ಧ್ಯೇಯ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.
ಮಂಡ್ಯನಗರದ ಹೊಸಹಳ್ಳಿ ವೃತ್ತದಲ್ಲಿರುವ ರುದ್ರಪ್ಪ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷಿನಲ್ ಜಿಲ್ಲೆ ೨೬೮ಎಸ್ ಮಂಡ್ಯ, ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಉದ್ಘಾಟನೆ ಹಾಗೂ ೭೦ನೇ ಕನ್ನಡ ರಾಜ್ಯೋತ್ಸವ-ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿನ ಬದಲಾದ ಜೀವನ ಶೈಲಿಯಿಂದ ಕ್ಯಾನ್ಸರ್ ಮತ್ತು ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ, ಕ್ಯಾನ್ಸರ್ ಮತ್ತು ಸಮಾಜ ಮತ್ತು ವೃದ್ದಾಶ್ರಮ ಮುಕ್ತ ಜೀವನ ನಿರ್ಮಾಣ ಮಾಡುವುದು ಪ್ರಮುಖ ಧ್ಯೇಯವನ್ನು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಗುರಿಯಾಗಿಸಿಕೊಂಡಿದೆ, ಇದಕ್ಕೆ ಅರಿವು ಹೆಚ್ಚಿಸಿಕೊಳ್ಳಲಿಕ್ಕೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಸಹಕಾರವನ್ನು ಕೋರಲಾಗುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಗಾಯಕರಾದ ವಂದನ, ವಿಶ್ವಾಸ್, ಕರಣ್ ರವರಿಂದ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು. ಅಲೈ ಸಿಂಧೂಶ್ರೀ ಕನ್ನಡ ಗೀತೆಗಳಿಗೆ ನೃತ್ಯವನ್ನು ಮಾಡುವುದರ ಮೂಲಕ ಎಲ್ಲರ ಮನ ಸೆಳೆದರು
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷಿನಲ್ ಜಿಲ್ಲೆ ೨೬೮ಎಸ್ ಜಿಲ್ಲಾ ರಾಜ್ಯಪಾಲ ಮಾದೇಗೌಡ, ಸೌತ್ ಮಲ್ಟಿಪಲ್ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಶಿಕ್ಷಕ ಕೆ.ಆರ್.ಶಶಿಧರ್ ಈಚಗೆರೆ, ೨ನೇ ಉಪರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿವಿ.ಎಸ್.ನಾಗರಾಜ್, ಜಿಲ್ಲಾ ಖಜಾಂಚಿ ಆರ್.ಮಹೇಶ್, ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು, ಜಿಲ್ಲಾ ರಾಯಬಾರಿ ಅಪ್ಪಾಜಿ, ಪ್ರಾಂತೀಯ ೧ನೇ ಅಧ್ಯಕ್ಷ ಟಿ.ಎನ್.ರಕ್ಷಿತ್ರಾಜ್, ಸಂಘದ ಪ್ರಾಯೋಜಕ ಡೇವಿಡ್ಪ್ರತಿಭಾಂಜಲಿ, ನೂತನ ಅಧ್ಯಕ್ಷ ಎಂ.ಪಿ.ಸಂತೋಷ್, ಕಾರ್ಯದರ್ಶಿ ಐಶ್ವರ್ಯ, ಖಜಾಂಚಿ ಧನಂಜಯ , ಡಾ. ವರ್ಷ ಹೂಗಾರ್, ಭಗವಾನ್, ಸಜಿನಿ ದಾಸ್, ಕಾವ್ಯ, ಭಾರ್ಗವಿ, ಸರಿತಾ ಮತ್ತಿತರರಿದ್ದರು.




