Friday, September 20, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳ ಜ್ಞಾನಕ್ಕಾಗಿ ಅವಕಾಶ ಸೃಷ್ಟಿ ಮಾಡಿ

ಮಕ್ಕಳಲ್ಲಿ ಜ್ಞಾನದ ವರ್ಚಸ್ಸಿಗೋಸ್ಕರ ಅವಕಾಶಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಾದರೆ ಖಂಡಿತ ಇತಿಹಾಸ ಪುನರ್ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಕೆ.ವಿ. ಶಂಕರಗೌಡ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ಡಿ.ಸುವರ್ಣ ತಿಳಿಸಿದರು.

ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನೋವಿಜ್ಞಾನದ ಪ್ರಕಾರ ಚಟುವಟಿಕೆಗಳ ಮೂಲಕ ನಾವು ಮನಸನ್ನು ತಲುಪುವುದಕ್ಕೆ ಹಾಗೂ ಅವರ ಅಂತರ್ಯವನ್ನು ಹೆಣೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಸಮಾಜದಲ್ಲಿ ಇರುವಂತಹ ಘಟನೆಗಳನ್ನು ಹೆಕ್ಕಿ ತೆಗೆದು ಅದನ್ನು ಅಕ್ಷರಶಃ ನೃತ್ಯ ಮನಸಿನಿಂದ ಮಾಡಿದರೆ ಖಂಡಿತವಾಗಿ ಮಕ್ಕಳಲ್ಲಿ ಒಂದಷ್ಟು ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಮಕ್ಕಳು ತರಗತಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳ ಬೇಕು. ಇರುವುದನ್ನೆ ಬಳಸುವ ರೀತಿ ಮಕ್ಕಳ ಮನಸ್ಸಿಗೆ ತರಬೇಕು ಎಂದರು.

ಡಿಡಿಪಿಐ ಟಿ.ಎಸ್ ಜವರೇಗೌಡ ಮಾತನಾಡಿ,ಪ್ರೌಢಶಾಲೆಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಆರು ವಿಷಯಗಳು ಬಹಳ ಪ್ರಮುಖ. ಸಮಾಜ ವಿಜ್ಞಾನದಲ್ಲಿ ಸಹ ಸಾಕಷ್ಟು ನಾವೀನ್ಯತೆಯನ್ನು ಕಾಣಬಹುದು ಎಂದರು.

ಪ್ರತಿ ವರ್ಷ ಸಮಾಜ ವಿಜ್ಞಾನ ವಿಷಯವನ್ನು ಬೋಧನೆ ಮಾಡುವ ಶಿಕ್ಷಕರು ಹೆಚ್ಚು ವಿಷಯವನ್ನು ತಿಳಿದುಕೊಳ್ಳಬೇಕು ಎಂದರು.

ಸಮಾಜ ವಿಜ್ಞಾನದಲ್ಲಿ ಎಷ್ಟು ಪಾಠಗಳಿವೆ ಎಂಬುದು ವಿದ್ಯಾರ್ಥಿಗಳಿಗೆ ಪರಿಚಯ ಇರಬೇಕು. ಎಷ್ಟು ಭೂಪಟಗಳು ಇವೆ, ಬೋಧನೆ ಮಾಡುವ ಸಂದರ್ಭದಲ್ಲಿ ನನ್ನ ಕೈಯಲ್ಲಿ ಎಷ್ಟು ಉಪಕರಣಗಳಿವೆ ಎಂಬುದನ್ನು ನವೀಕರಿಸ ಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ. ಕೆ ಚೆನ್ನ ಕೃಷ್ಣಯ್ಯ, ಜಿ ಬೀರಲಿಂಗಯ್ಯ, ಬಾನು ಕುಮಾರ್, ಡಾ. ಜಿ. ಆರ್. ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!