Friday, September 20, 2024

ಪ್ರಾಯೋಗಿಕ ಆವೃತ್ತಿ

ಕಣ್ಮರೆಯಾಗುತ್ತಿರುವ ಕಣ್ಮಣಿಗಳು : ಸಾಮಾಜಿಕ ಅವಲೋಕನ

ವಿಮೋಚನ ಮಹಿಳಾ ಸಂಘಟನೆ ಬೆಂಗಳೂರು, ಮಂಡ್ಯ ಶಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಣ್ಮರೆಯಾಗುತ್ತಿರುವ ಕಣ್ಮಣಿಗಳು, ಲಿಂಗ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ಸಾಮಾಜಿಕ ಅವಲೋಕನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಂಡ್ಯ ತಾಲ್ಲೂಕಿನ ಕೊಡಿಯಾಲ ಸರ್ಕಾರಿ ಕಾಲೇಜಿನಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಉದ್ಘಾಟಿಸಿ, ಸಮಾಜದಲ್ಲಿ ಹೆಣ್ಣು ಗಂಡು ಮಕ್ಕಳು ಎಂದು ತಾರತಮ್ಯ ಮಾಡಬಾರದು .

ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮುಂದೇ ಇದ್ದಾರೆ, ಅದರೂ ಕೂಡ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದನ್ನು ನಾವೆಲ್ಲರೂ ತಲೆ ತಗ್ಗಿಸಬೇಕು.

ವಿಮೋಚನ ಮಹಿಳಾ ಸಂಘಟನೆಯು ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾಕ್ಟರ್ ಹೇಮಲತಾರವರು ಮಾತನಾಡುತ್ತಾ ಕಣ್ಮರೆಯಾಗುತ್ತಿರುವ ಕಣ್ಮಣಿಗಳು ಶೀರ್ಷಿಕೆ ತುಂಬಾ ಚೆನ್ನಾಗಿದೆ.

ಇಂದು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇಂದಿಗೂ ಕೂಡ ಹೆಣ್ಣು ಭ್ರೂಣ ಹತ್ಯೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆ. ಹೆಣ್ಣು ಮಕ್ಕಳನ್ನು ಕಣ್ಣು ಬಿಡುವ ಮುನ್ನವೇ ಸಾಯಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳನ್ನು ಕಂಡರೆ ಕೀಳರಿಮೆ ಇದೆ. ಹೆಣ್ಣು ದೈಹಿಕ, ಸಾಮಾಜಿಕ, ಆರ್ಥಿಕವಾಗಿ ಪುರುಷರಷ್ಟೇ ಸರಿಸಮಾನಳು. ಪ್ರಕೃತಿ ಮನುಷ್ಯನ ಎಲ್ಲಾ ಆಸೆಗಳನ್ನು ಪೂರೈಸುತ್ತಿದ್ದೆ.ಪ್ರಕೃತಿಯು ದುರಾಸೆಯನ್ನು ಪೂರೈಸಲು ಸಾದ್ಯವಿಲ್ಲ. ಪ್ರಕೃತಿ ವಿರುದ್ಧ ನಾವು ನಡೆಯುವುದು ಬೇಡಾ, ಲಿಂಗತಾರತಮ್ಯ ಬೇಡಾ, ಹೆಣ್ಣು ಭ್ರೂಣ ಹತ್ಯೆ ಬೇಡವೇ ಬೇಡ ಎಂದು ತಿಳಿಸಿದರು.

ಮಹಿಳಾ ಮುನ್ನಡೆಯ ಕಾರ್ಯದರ್ಶಿ ಪೂರ್ಣಿಮ ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟಿರುವ ಲೈಂಗಿಕ ಕಿರುಕುಳದ ಬಗೆಗೆ ಮತ್ತು ಅದರ ಕಾನೂನಿನ ಬಗ್ಗೆ ವಿವರಿಸಿದರು.

ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ದಿನ ಹಲವು ಕಟ್ಟು ನಿಟ್ಟಿನಲ್ಲಿ ಕಾನೂನಿನ ಕಾಯ್ದೆಗಳು ಜಾರಿಯಾಗಿದ್ದರೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು  ದೌರ್ಜನ್ಯಗಳು ನಿಲ್ಲುತ್ತಿಲ್ಲ.

ಕಾರಣ ಆಳುತ್ತಿರುವ ಸರ್ಕಾರಗಳು ಅತ್ಯಾಚಾರಿಗಳ ಪರವಾಗಿ ನಿಲ್ಲುತ್ತಿರುವುದು ಮತ್ತು ಅಪರಾಧಗಳಿಗೆ ಹೆಣ್ಣು ಮಕ್ಕಳನ್ನೆ ಹೊಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಅಶ್ಲೀಲ ವಿಡಿಯೋಗಳು ಸಿನಿಮಾಗಳಿಂದಾಗಿ ಪುಟ್ಟ ಮಕ್ಕಳು ಕೂಡಾ ಅತ್ಯಾಚಾರಿಗಳಾಗಿ ಬಾಲ ಅಪರಾಧಿಗಳಾಗುತ್ತಿದ್ದಾರೆ.

ಇವತ್ತಿನ ಕಾನೂನಿನ ವ್ಯವಸ್ಥೆ ಮತ್ತು ಕೋರ್ಟಗಳಲ್ಲಿಯೂ ಸರಿಯಾದ ತನಿಖೆಯಾಗಿ ಬೇಗನೆ ತೀರ್ಪು ಬರದೆ ವಿಳಂಬವಾಗುತ್ತಿರುವುದು ಅಲ್ಲದೆ ಅತ್ಯಾಚಾರಿಗಳನ್ನು ರಕ್ಷಿಸುವ ಹುನ್ನಾರಗಳು ಮತ್ತು ಪೋಕ್ಸೊ ಅಂತಹ ಪ್ರಕರಣಗಳಿಗೂ ಜಾಮಿನು ನೀಡುತ್ತಿರುವುದಲ್ಲದೆ ಅಪರಾಧಿಗಳನ್ನು ಬಂಧಿಸದೆ ಸಾಕ್ಷಿ ನಾಶದಂತಹ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿದೆ.

ಇಲ್ಲಿ ವರ್ಗ- ಪಕ್ಷ -ಜಾತಿ ಎಲ್ಲವೂ ಕೆಲಸ ಮಾಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಬಿಲ್ಕಿಸ್ ಭಾನುವಿನ ಪ್ರಕರಣ,ಮುರುಗ ಮಠದ ಪ್ರಕರಣ ಈ ಹಲವು ಪ್ರಕರಣಗಳು ನಮಗೆ ಕಾಣಸಿಗುತ್ತದೆ. ಅದೇನೆ ಇದ್ದರೂ ಅತ್ಯಾಚಾರಕ್ಕೆ ಒಳಗಾಗುತ್ತಿರುವ ಹೆಣ್ಣು ಮಕ್ಕಳನ್ನು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಬಾಲ ಅಪರಾಧಿಗಳಾಗುತ್ತಿರುವ ಮಕ್ಕಳನ್ನು ರಕ್ಷಿಸುವ ಹೊಣೆ ನಮ್ಮದಾಗಿದೆ. ಇದಕ್ಕೆ ಹೆಚ್ಚಾಗಿ ಅರಿವಿನ ಕಾರ್ಯಕ್ರಮದ ಅಗತ್ಯವಿದೆ ಇದರ ಜೊತೆಗೆ ಕಾನೂನಿನ ಹೋರಾಟ ಮಾಡುತ್ತಾ, ಉಳ್ಳವರ ಪರವಾಗಿರುವ ವ್ಯವಸ್ಥೆಯನ್ನೂ ಬದಲಿಸಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಮುಕ್ತ ಸಮಾಜ ಕಟ್ಟುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ. ಗರ್ಭ ಪೂರ್ವ & ಪ್ರಸವ.ಪೂರ್ವ ಭ್ರೂಣ, ಲಿಂಗ ಪತ್ತೆ ಹಾಗೂ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತ್ತು.

ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಅಧ್ಯಕ್ಷರು ಗ್ರಾಮ ಪಂಚಾಯಿತಿ, ಕಾರ್ಯದರ್ಶಿ ನಿಶ್ಚಿತ, ಶಿವಾನಂದ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳು, ಸಿದ್ದರಾಜು, ಶಿಲ್ಪಾ, ವಿಮೋಚನ ಮಹಿಳಾ ಸಂಘಟನೆಯ ಜನಾರ್ಧನ ಹೂತಗೆರೆ, ಶ್ರೀ ಇಂಪನ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪುಟ್ಟಸ್ವಾಮಿ ಇತರರು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!