Thursday, September 19, 2024

ಪ್ರಾಯೋಗಿಕ ಆವೃತ್ತಿ

ಲಾಭದಲ್ಲಿ ಅಣ್ಣೂರು ಹಾಲು ಉತ್ಪಾದಕರ ಸಂಘ – ಎ.ಸಿ.ಸತೀಶ್

ಮದ್ದೂರು ತಾಲ್ಲೂಕಿನ ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘ ಕಳೆದ ಸಾಲಿನಲ್ಲಿ 17,27,650 ರೂ.ಗಳ ಲಾಭಗಳಿಸುವ ಮೂಲಕ ತಾಲ್ಲೂಕಿನಲ್ಲೇ ಪ್ರಥಮ ಸ್ಥಾನಗಳಿಸಿದೆ ಎಂದು ಮನ್ ಮುಲ್  ನಿರ್ದೇಶಕ ಎ.ಸಿ.ಸತೀಶ್ ಹೇಳಿದರು.

ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು, ಮುಂದೆಯೂ ರೈತರು ರೀತಿ ಗುಣಮಟ್ಟ ಹಾಲು ಸರಬರಾಜು ಮಾಡಿ ಸಂಘದಿಂದ ಬರುವ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರತೀದಿನ 2,300 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಸಂಘದಲ್ಲಿ 965 ಸದಸ್ಯರಿದ್ದಾರೆ. ರಾಸುಗಳ ವಿಮೆ, ಓಜಿಐ ಗುಂಪು ವಿಮೆ ಯೋಜನೆಗಳು ಸಂಘದಲ್ಲಿವೆ, ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿದ್ದಶೆಟ್ಟಿ ಅವರು ವಾರ್ಷಿಕ  ವರದಿ ಮಂಡಿಸಿದರು.

ಜಿಲ್ಲಾ ಹಾಲು ಒಕ್ಕೂಟದ ತಾಲ್ಲೂಕು ಮುಖ್ಯಸ್ಥೆ ಡಿ.ಎಚ್.ದಿವ್ಯಶ್ರೀ, ವಿಸ್ತರಣಾಧಿಕಾರಿ ರುಮಾನಾ, ಲೋಕೇಶ್, ಸಹಾಯಕ ವ್ಯವಸ್ಥಾಪಕ ಹನುಮಂತು, ಗ್ರಾ.ಪಂ ಅಧ್ಯಕ್ಷೆ ನಾಗಮಣಿ ಮಹೇಂದ್ರ, ಸಂಘದ ಅಧ್ಯಕ್ಷ ಜಯರಾಮು, ಉಪಾಧ್ಯಕ್ಷೆ ಜ್ಯೋತಿ, ನಿರ್ದೇಶಕರಾದ ರೇವಣ್ಣ, ಎ.ಚಂದ್ರು. ಯೋಗೇಶ್, ಚಂದ್ರಶೇಖರ್, ಎ.ಸಿ.ನಾಗರಾಜು, ಕೃಷ್ಣ, ಕೆ.ಬಿ.ಶಿಲ್ಪ, ಗೌರಮ್ಮ, ಸಿಬ್ಬಂದಿಗಳಾದ ಪ್ರತಾಪ್ ಗೌಡ, ಸುನೀಲ್, ರವಿ, ರಾಮಚಂದ್ರು ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!