Sunday, September 8, 2024

ಪ್ರಾಯೋಗಿಕ ಆವೃತ್ತಿ

ರೈತರ ನಿಯೋಗದಿಂದ ರಾಹುಲ್ ಗಾಂಧಿ ಭೇಟಿ| ಎಂಎಸ್‌ಪಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಮನವಿ

ರೈತರು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗಾಗಿ ಗ್ಯಾರಂಟಿ ಖಾತರಿ ಪಡೆಯುವವರೆಗೂ ಇಂಡಿಯಾ ಒಕ್ಕೂಟ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಸಂಸದೀಯ ಭವನ ಸಂಕೀರ್ಣದಲ್ಲಿ ರೈತ ನಾಯಕರ ನಿಯೋಗವನ್ನು ಭೇಟಿ ನೀಡಿದ ನಂತರ ಮಾತನಾಡಿದರು.

ರೈತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಲು ಆಗಮಿಸಿದ್ದ ಪಂಜಾಬ್‌, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕದ ರೈತ ನಾಯಕರ ನಿಯೋಗವನ್ನು ಭೇಟಿ ಮಾಡಿದ ನಂತರ ಮಾತನಾಡಿದರು.

“ನಾವು ಎನ್‌ಡಿಎ ಒಕ್ಕೂಟದ ನಾಯಕರೊಂದಿಗೆ ಚರ್ಚೆ ನಡೆಸಿ ಎಂಎಸ್‌ಪಿಗಾಗಿ ರೈತರಿಗಾಗಿ ಕಾನೂನು ಖಾತರಿ ನೀಡಲು ಮೋದಿ ಸರ್ಕಾರ ಮೇಲೆ ಒತ್ತಡವೇರುತ್ತೇವೆ” ಎಂದು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತ ನಾಯಕರ ನಿಯೋಗದಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ಸೇರಿದಂತೆ 12 ರೈತ ನಾಯಕರು ಹಾಜರಿದ್ದರು. ಸಭೆಯಲ್ಲಿ ರೈತರು ತಮ್ಮ ತಮ್ಮ ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್‌ ಗಾಂಧಿ ಅವರಿಗೆ ತಿಳಿಸಿದರು.

ತಮ್ಮ ಬೇಡಿಕೆಗಳ ಬಗ್ಗೆ ಹಾಗೂ ಹರಿಯಾಣದಲ್ಲಿ ರೈತರ ಮೇಲೆ ಗುಂಡು ಸಿಡಿಸಿದ ಘಟನೆಯ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ರಾಹುಲ್‌ ಗಾಂಧಿ ತಿಳಿಸಿರುವುದಾಗಿ ರೈತ ನಾಯಕರು ಸಭೆಯ ನಂತರ ಹೇಳಿದರು.

ರಾಹುಲ್‌ ಪಾಲ್ಗೊಂಡಿದ್ದ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್, ದೀಪೇಂದರ್ ಸಿಂಗ್ ಹೂಡಾ, ಅಮರೇಂದರ್ ಸಿಂಗ್ ರಾಜ ಮುಂತಾದವರು ಹಾಜರಿದ್ದರು. ಈ ವರ್ಷದ ಫೆಬ್ರವರಿ 21 ರಂದು ಹರ್ಯಾಣದ ಹಿಸ್ಸಾರ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅಶ್ರುವಾಯು ಸಿಡಿಸಿದ್ದರು.

ಸುಪ್ರೀಂ ಕೋರ್ಟ್ ಕೂಡ ಜುಲೈ 24ರಂದು ಬೆಳೆಗಳಿಗೆ ಎಂಎಸ್‌ಪಿ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಿತಿಯನ್ನು ರಚಿಸುವಂತೆ ಆದೇಶಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!