Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಂಭ್ರಮದ ಪ್ರತಿಭಾ‌ ಕಾರಂಜಿ- ಕಲೋತ್ಸವ

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ವಿಮಲಾ ಅಕಾಡೆಮಿ ಪ್ರೌಢಶಾಲೆಯಲ್ಲಿ ವಿವಿದ ಕ್ಲಸ್ಟರ್ ಗಳ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.

ಮಂಡ್ಯ 3 ಮತ್ತು 4, ಸೂನಗನಗಳ್ಳಿ ತಗ್ಗಹಳ್ಳಿ ಕ್ಲಸ್ಟರ್ ಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ 19ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು ಸೋಲು ಮುಖ್ಯ ಅಲ್ಲ, ಸೋತವರು ಕುಗ್ಗದೇ, ಗೆದ್ದವರು ಹಿಗ್ಗದೇ ಸ್ಪರ್ಧೆಯನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ ಶಿವರಾಮು, ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಮ ತಾಲೂಕು ಅಧ್ಯಕ್ಷ ಮಂಗಲ ಶಿವಣ್ಣ, ಉಪಾಧ್ಯಕ್ಷೆ ಸುರೇಖಾ, ಸಂಘಟನಾ ಕಾರ್ಯದರ್ಶಿ ಮಹಾಂತ ದೇವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು

ಶಿಕ್ಷಣ ಸಂಯೋಜಕರಾದ ಬಿ. ಎಲ್.ಮಧುಸೂದನ, ಸ್ವಾಮಿ ಚೈತನ್ಯ ಮೂರ್ತಿ ಶಶಿಧರ, ಬಿ ಆರ್ ಪಿ ಗಳಾದ ಎ.ಡಿ.ನಂದೀಶ್, ಆರ್. ರಘು, ಜಿ.ಕೆ.ಲೋಕೇಶ್ ಸಿಆರ್‌ಪಿಗಳಾದ ಭರತ್ ಕುಮಾರರಾಧ್ಯ, ವರದರಾಜು, ಫಿರ್ ದೋಸ್ ಫಾತಿಮಾ, ಮುಖ್ಯ ಶಿಕ್ಷಕರಾದ ಆಲ್ಫ್ರೆಡ್ ದೀಪಕ್, ಸಿಸ್ಟರ್ ಆಲ್ಫಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!