Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ನೇಹ ಮತ್ತು ಸೇವೆಯೇ ಲಯನ್ಸ್ ಸಂಸ್ಥೆಯ ಧ್ಯೇಯ

ಸ್ನೇಹ ಮತ್ತು ಸೇವೆಯೇ ಲಯನ್ಸ್ ಸಂಸ್ಥೆಗಳ ಮೂಲ ಧ್ಯೇಯ ಎಂದು ಮಾಜಿ ರಾಜ್ಯಪಾಲ ಡಾ.ನಾಗರಾಜು ವಿ.ಭೈರಿ ಹೇಳಿದರು.

ಮಂಡ್ಯ ನಗರದಲ್ಲಿರುವ ಅಗ್ರಿ ಸಂಸ್ಥೆ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಕೃಷಿಕ ಲಯನ್ಸ್ ಸಂಸ್ಥೆ ಮಂಡ್ಯ ಇವರು ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಜಯಪ್ರಕಾಶಗೌಡ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ 50ಸಾವಿರ ಲಯನ್ಸ್ ಸಂಸ್ಥೆಗಳಿವೆ. ಕಳೆದ 5ವರ್ಷಗಳಿಂದ ಸುಮಾರು 25 ಸಾವಿರ ಕೋಟಿ ರೂ.ಗಳ ಸೇವಾ ಕಾರ್ಯಗಳು ಸಮಾಜಮುಖಿಯಾಗಿ ನಡೆದಿವೆ ಎಂದು ನುಡಿದರು.

ಇಂದಿನ ದಿನಗಳಲ್ಲಿ ಲಯನ್ಸ್ ಸಂಸ್ಥೆಯು ತುಂಬ ವಿಸ್ತಾರವಾಗಿ ಬೆಳೆದಿದೆ. ತಂಡ ತಂಡಗಳು ಉತ್ತಮ ಸೇವಾ ಕಾರ್ಯ ನೀಡುತ್ತ ಬರುತ್ತಿದೆ.ಇಲ್ಲಿ ಸ್ನೇಹ ಮತ್ತು ಸೇವೆಗೆ ಹೆಚ್ಚಿನ ಆದ್ಯತೆ ನೀಡಿದೆ. ಸೇವೆ ಮಾಡುವವರು ಲಯನ್ಸ್ ಸಂಸ್ಥೆಗೆ ಸೇರಬಹುದು.ನಾಯಕತ್ವ ಗುಣ ಮತ್ತು ಸೇವಾ ಮನೋಭಾವ ಬಳೆಸಿಕೊಳ್ಳಬಹದು ಎಂದು ತಿಳಿಸಿದರು.

ಮೈಸೂರು, ಬೆಂಗಳೂರು ತರಹದ ದೊಡ್ಡ ದೊಡ್ಡ ನಗರದಲ್ಲಿ ಲಯನ್ಸ್ ತಂಡಗಳು ಕಡಿಮೆ. ಮಂಡ್ಯ ಜಿಲ್ಲೆಯಲ್ಲಿ ಇರುವಷ್ಟು ಲಯನ್ಸ್ ತಂಡಗಳು,ಇಲ್ಲಿ ನಡೆಯುಷ್ಟು ಸೇವಾಕಾರ್ಯಗಳು ಮತ್ತೆಲ್ಲೂ ನಡೆಯುತ್ತಿಲ್ಲ. ಗಂಡುಮೆಟ್ಟಿದ ನಾಡಿನ ಜಿಲ್ಲೆ ಅನ್ನೋದು ಇದಕ್ಕೆ ಇರಬೇಕು ಎಂದು ಸ್ಮರಿಸಿದರು.

ಬಳಿಕ 2022-23ನೇ ಸಾಲಿನ ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಮೋಹನ್ ಕುಮಾರ್ ಮತ್ತು ತಂಡದವರು ಪ್ರತಿಜ್ಞಾವಿಧಿ ಸ್ವೀಕರಿಸಿ ಅಧಿಕಾರ ಪಡೆದುಕೊಂಡರು. ಗಣ್ಯರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಜಯರಾಮು, ಪಿಎಸ್ ಟಿ ಫೋರಂ ಅಧ್ಯಕ್ಷ ಪ್ರಭುಸ್ವಾಮಿ, ಎಚ್.ಎಂ. ಕೆ. ಜಗದೀಶ್, ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ. ಹನುಮಂತು, ಪ್ರಾಂತೀಯ ಅಧ್ಯಕ್ಷೆ ರತ್ನಮ್ಮ, ವಲಯ ಅಧ್ಯಕ್ಷ ಪಿ. ಪುಟ್ಟಸ್ವಾಮಿ, ಕೆ. ಆರ್. ಶಶಿಧರ ಈಚಗೆರೆ, ಎ.ಆರ್. ಕುಮಾರ್, ಕೆ. ಎಸ್. ರಮೇಶ್, ಕೆ.ಸಿ. ರವೀಂದ್ರ, ಎಸ್. ರಮೇಶ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!