Thursday, November 19, 2026

ಪ್ರಾಯೋಗಿಕ ಆವೃತ್ತಿ

ಉತ್ತಮವಾದ ಕಲಿಕೆ ಜೀವನದ ದಾರಿ ತೋರಿಸುತ್ತದೆ

ಉತ್ತಮವಾದ ಕಲಿಕೆಯಿಂದ ಜೀವನ ದಾರಿ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ 2022 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಪ್ರಾರಂಭದಲ್ಲಿ ಪಠ್ಯಕ್ರಮದ ಬಗ್ಗೆ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಪ್ರಸ್ತುತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಹಳ ಪೈಪೋಟಿ ಇದೆ. ಹಾಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ, ಶ್ರದ್ಧೆಯಿಂದ ಕಲಿತರೆ ಜೀವನದಲ್ಲಿ ಒಂದು ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಮಂಡ್ಯ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ 2022 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು.

ಅತಿ ಎತ್ತರ ಮಟ್ಟದಲ್ಲಿ ಗುರಿ ಇರಬೇಕು. ಆ ಗುರಿಯನ್ನು ತಲುಪಲು ಚೆನ್ನಾಗಿ ಓದಿಕೊಂಡು ಪರೀಕ್ಷೆಗಳನ್ನು ಎದುರಿಸಲು ಸಿದ್ಧವಿರಬೇಕು. ಒಂದು, ಎರಡು, ಮೂರು ಬಾರಿ ಪರೀಕ್ಷೆ ಬರೆದು ಯಶಸ್ಸು ಕಾಣದೇ ಇದ್ದರೂ ಸಹ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಸತತ ಪ್ರಯತ್ನದಿಂದಲೇ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಓದಿನಿಂದ ಹೆಚ್ಚು ಜ್ಞಾನವು ಬೆಳೆಯುತ್ತದೆ.ಸಮಾಜದಲ್ಲಿ ಉತ್ತಮ ನಾಗರಿಕರಾಗಬಹುದು. ಒಳ್ಳೆಯ ಮೌಲ್ಯಗಳು ಸಹ ಸಿಗುತ್ತವೆ.ಆ ಮೌಲ್ಯಗಳ ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಬಹುದು ಎಂದು ಹೇಳಿದರು.

ಓದಿನ ಕಡೆಗೆ ಮನಸ್ಸಿರಲಿ

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಜಾಗೃತವಾಗಬೇಕಾದರೆ ಬಹಳ ಮುಖ್ಯವಾಗಿ ವಿದ್ಯೆ ಇರಬೇಕು.ವಿದ್ಯಾರ್ಥಿಗಳು ಮನಸ್ಸನ್ನು ಸದಾ ಓದಿನ ಕಡೆಗೆ ಕೇಂದ್ರೀಕೃತ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ ಅವರು ತಿಳಿಸಿದರು.

ಪ್ರತಿದಿನ ಉತ್ತಮವಾದ ಸುದ್ದಿಯನ್ನು ವೀಕ್ಷಣೆ ಮಾಡವ ಜೊತೆಗೆ ದಿನಪತ್ರಿಕೆಗಳನ್ನು ತಪ್ಪದೇ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಈ ಅಂಶಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತಹ ವಿದ್ಯಾರ್ಥಿಗಳಲ್ಲಿ ಇರಲೇಬೇಕಾದಂತಹ ಲಕ್ಷಣಗಳಾಗಿವೆ.ನಿಮ್ಮ ದುಡಿಮೆಯನ್ನು ನೀವೇ ಮಾಡಿಕೊಂಡರೆ ಅದಕ್ಕಿಂತ ಯಶಸ್ಸು ಬೇರೊಂದಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಹಬ್ಬ, ಸಂಭ್ರಮಗಳನ್ನು ತ್ಯಜಿಸಿ ಪರಿಶ್ರಮದಿಂದ, ಧೈರ್ಯದಿಂದ, ಸ್ವಚ್ಛಂದ ಮನಸ್ಸಿನಿಂದ ಸಮರ್ಪಕವಾಗಿ ಓದಿದ್ದೇ ಆದಲ್ಲಿ ಸಮಾಜದಲ್ಲಿ ಉತ್ತಮ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ಜೀವನದಲ್ಲಿ ಮೂರರಿಂದ ನಾಲ್ಕು ವರ್ಷ ಕಷ್ಟಪಟ್ಟರೆ ಮುಂದೆ 30-40 ವರ್ಷ ನೆಮ್ಮದಿಯಿಂದ ಇರಬಹುದು. ಕಷ್ಟಪಡದೆ ಹೋದರೆ ಮುಂದೆ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ ಎಂದರು.

ಉತ್ತಮ ಯೋಜನೆ ಹಾಕಿಕೊಳ್ಳಿ

ವಿದ್ಯಾರ್ಥಿ ಜೀವನದಲ್ಲಿ ಓದಲಿಕ್ಕೆ ಇದು ಸರಿಯಾದ ಸಮಯವಾಗಿದೆ. ಉತ್ತಮ ಯೋಜನೆಗಳನ್ನು ಹಾಕಿಕೊಂಡು ಜೀವನವನ್ನು ರೂಪಿಸಿಕೊಳ್ಳುವ ಕಡೆಗೆ ಗಮನ ಅರಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಾಂತ ಎಂ. ಹುಲ್ಮನಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐಎಎಸ್ ಮಾಡಬೇಕು ಎಂಬ ಮನೋಭಾವದ ಜೊತೆಗೆ ಆತ್ಮವಿಶ್ವಾಸ ಸಹ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಸಾಕಷ್ಟು ತಾಳ್ಮೆಯನ್ನು ನಿರೀಕ್ಷೆ ಮಾಡುತ್ತವೆ. ನಾಳೆ ಪರೀಕ್ಷೆ ಇದೆ ಎಂದು ಇವತ್ತು ಓದಿದರೆ ಅಂದುಕೊಂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ. ದೃಢವಾದ ಆತ್ಮ ವಿಶ್ವಾಸ, ತಾಳ್ಮೆಯಿಂದ ಓದಬೇಕು ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಬಿ.ರಂಗೇಗೌಡ, ಸಹಾಯಕ ನಿರ್ದೇಶಕರಾದ ಕಾವ್ಯಶ್ರೀ, ಪ್ರಗತಿಪರ ಸಂಘಟನೆಯ ಪದಾಧಿಕಾರಿ ರಾಮಯ್ಯ
ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ