Tuesday, November 24, 2026

ಪ್ರಾಯೋಗಿಕ ಆವೃತ್ತಿ

ಯಾರು ಒಕ್ಕಲಿಗ ಅನ್ನೋದನ್ನ ಜನ ತೀರ್ಮಾನ ಮಾಡ್ತಾರೆ

ನಿಮಗೆ ನೀವು ಒಕ್ಕಲಿಗ ಅಂತ ಸರ್ಟಿಫೈ ಮಾಡಿಕೊಳ್ಳೋದಲ್ಲ,ಅದನ್ನು ಜನರು ತೀರ್ಮಾನ ಮಾಡ್ತಾರೆ ಅಂತ ಡಿ.ಕೆ‌.ಶಿವಕುಮಾರ್ ಮತ್ತು ಹೆಚ್‌.ಡಿ.ಕುಮಾರ ಸ್ವಾಮಿಗೆ ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಮದ್ದೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನ್ ಒಕ್ಕಲಿಗ,ಒಕ್ಕಲಿಗ ಎಂದು ಸರ್ಟಿಫಿಕೇಟ್ ನೀಡೋದರ ಅರ್ಥ ಅವರು ಒಕ್ಕಲಿಗರೇ ಅಲ್ಲಾ ಎಂದು ಭಾಸವಾಗುತ್ತದೆ.

ಯಾರು ಒಕ್ಕಲಿಗ ನಾಯಕ ಎಂದು ಜನ ತೀರ್ಮಾನ ಮಾಡಬೇಕು.
ಅವರ ಪಕ್ಷದಲ್ಲಿ ಒಳ ಜಗಳದ ಬೆಂಕಿ ಬಿದ್ದು ಬೀದಿಗೆ ಬಂದಿದೆ.
ಜಾತಿ ಆಧಾರದ ಮೇಲೆ ನಾವು ಚುನಾವಣೆ ಮಾಡಿದ್ರೆ ಜನ ಓಟ್ ಹಾಕ್ತಾರಾ? ಎಲ್ಲಾ ಜಾತಿಯವರು ಓಟ್ ಹಾಕಿದ್ರೆ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ. ಜಾತಿ ಹೆಸರಲ್ಲಿ ಕಾರ್ಡ್ ಪ್ಲೇ ಮಾಡಿ ಸಮಾಜ ಒಡೆಯುವಂತಹ ಕೆಲಸ ಮಾಡಬೇಡಿ ಎಂದರು.

ಹಿಂದೆ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತರು ಎಂದು ಸಮಾಜ ಒಡೆಯುವ ಕೆಲಸ ಮಾಡಿ ರಾಜಕೀಯ ಅಧಿಕಾರ ಕಳೆದುಕೊಂಡರು.ಈಗ ಅದೇ ಸ್ಥಿತಿ ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿಗೆ ಬರಲಿದೆ ಎಂದರು. ಜಾತಿ ಒಡೆಯ ಬೇಡಿ, ಅದರಿಂದ ನಿಮಗೆ ಏನು ಪ್ರಯೋಜನ ಆಗಲ್ಲ..ಆ ರೀತಿ ಮಾಡಿದ್ರೆ ಇರೋ ಕ್ಷೇತ್ರಗಳು ಅವರಿಂದ ಹೊರಟು ಹೋಗಲಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಎಸ್. ಪಿ. ಸ್ವಾಮಿ. ಅಶೋಕ್ ಜಯರಾಮ್,ಹನುಮಂತು ಶಿವದಾಸ್ ಸತೀಶ್. ರಘು‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ