Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಮಳೆಗಾಗಿ ಕತ್ತೆಗಳ ಮೆರವಣಿಗೆ: ವರುಣನಿಗೆ ಪೂಜೆ

ಮುಂಗಾರು ಬೆಳೆಗಳು ಹೊಲಗಳಲ್ಲಿ ನಳನಳಿಸಬೇಕಿದ್ದ ಕಾಲವಾದರೂ ಇಳೆಗೆ ಮಳೆ ಬರದಿದ್ದರಿಂದ ಕಂಗಾಲಾಗಿರುವ ನಾಗಮಂಗಲ ಪಟ್ಟಣದ ರೈತಾಪಿ ವರ್ಗದ ಜನ ಇಂದು ನಾಗಮಂಗಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕತ್ತೆ ಮೆರವಣಿಗೆ ಮಾಡಿ ದೇವರಿಗೆ ಹರಕೆ ಕಟ್ಟಿ, ಪೂಜಾದಿ ಕೈಂಕರ್ಯಗಳನ್ನು ನೆರವೇರಿಸಿದರು.

ಸಕಾಲದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಕೃಷಿ ಭೂಮಿ ಪಾಂಡವರ ಬೀಳಿನಂತಾಗಿದೆ ತೆಂಗು ಅಡಿಕೆ ಮರಗಳು ಧರೆಗುರುಳುತ್ತಿವೆ .ರೈತಾಪಿ ವರ್ಗದ ಆದಾಯದ ಮೂಲ ಕೃಷಿ ಬೆಳೆಗಳಾದ್ದರಿಂದ ಬೆಳೆಗಳಿಗೆ ಅಗತ್ಯ ನೀರಿನ ಮೂಲಸೆಲೆ ಮಳೆಯ ಬರುವಿಕೆಗಾಗಿ ಪೂಜೆ ನೆರವೇರಿಸಲಾಗುತ್ತಿರುವುದಾಗಿ ತಿಳಿಸಿದರು.

ಪ್ರತಿನಿತ್ಯ ತೀವ್ರ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದ್ದರು ತುಂತುರು ಹನಿಯ ಸಿಂಚನವಷ್ಟೇ ಆಗುತ್ತಿದೆ ಕಾಲಾನುಕ್ರಮದಲ್ಲಿ ಸೂಕ್ತ ಮಳೆಯಾದರೆ ಜನ ಜಾನುವಾರುಗಳಿಗೆ ಕುಡಿಯಲು ಹಾಗೂ ಬೇಸಾಯಕ್ಕೆ ನೀರು ದೊರಕಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ, ಆ ನಿಟ್ಟಿನಲ್ಲಿ ಗಂಗಾ ಮಾತೆ ಮತ್ತು ವರುಣ ದೇವರಿಗೆ ಪೂಜೆ ಸಲ್ಲಿಸಿ ನಾಡಿನ ಜನರು ಸುಭಿಕ್ಷತೆಯಿಂದ ಬದುಕಲು ಅನುವು ಮಾಡಿಕೊಡಿರೆಂದು ದೇವರಲ್ಲಿ ಮೊರೆಯಿಟ್ಟರು.

ಪ್ರಾಚ್ಯ ವಸ್ತು ಸಂಗ್ರಾಹಕ ರಾಮಕೃಷ್ಣ, ಕನ್ನಡ ಸಂಘದ ಅಧ್ಯಕ್ಷ ಅಲಮೇಲು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!