Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬರಿಗೂ ಸೂರು ನಮ್ಮ ಸರ್ಕಾರದ ಗುರಿ: ವಿ.ಸೋಮಣ್ಣ

ಪ್ರತಿಯೊಬ್ಬರಿಗೂ ಸೂರು ಕೊಡಬೇಕೆನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ.ಅದರಂತೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ 632 ಮನೆಗಳನ್ನು ನಿರ್ಮಿಸಿ ಇಂದು ಹಂಚಿಕೆ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯಲ್ಲಿ ರಾಜೀವ್ ಅವಾಸ್ ಯೋಜನೆ (ಪ್ರಸ್ತುತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಿಲೀನಗೊಂಡಿರುವ) ಅಡಿಯಲ್ಲಿ ನಿರ್ಮಿಸಿರುವ 632(ಜಿ+1) ಮಾದರಿಯ ಮನೆಗಳ ಉದ್ಘಾಟನೆ, ಹಂಚಿಕೆ ಮತ್ತು ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಹಾಲಹಳ್ಳಿಯಲ್ಲಿ ಇನ್ನು 80 ಮನೆಗಳ ನಿರ್ಮಾಣ ಕಾಮಗಾರಿ ಆಗಬೇಕಾಗಿದ್ದು, ಜಿಲ್ಲಾಧಿಕಾರಿಗಳು ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟರೆ ಅದನ್ನು ಶೀಘ್ರ ನಿರ್ಮಾಣ ಮಾಡಲು ಮುಂದಾಗುವುದಾಗಿ ಭರವಸೆ ನೀಡಿದರು.

ಇನ್ನು 575 ಮನೆಗಳನ್ನು ಚಿಕ್ಕ ಮಂಡ್ಯದ ಬಳಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಮನೆಗಳು ಮುಗಿಯುವ ಹಂತದಲ್ಲಿದೆ ಎಂದರು.

ಕೆಲವು ಭಾಗಗಳಲ್ಲಿ ಬಡ ಜನರಿಗೆ ಮನೆ ನಿರ್ಮಿಸಿಕೊಡುವಂತೆ ಮಂಡ್ಯ ಲೋಕಸಭಾ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿಯೊಬ್ಬರಿಗೂ ಸೂರು ನೀಡಬೇಕೆನ್ನುವುದು ಮಾನ್ಯ ಪ್ರಧಾನಮಂತ್ರಿಗಳ ಕನಸಾಗಿದ್ದು, ಇಂದು ವಸತಿ ಸೌಲಭ್ಯ ಪಡೆದಿರುವವರಿಗೆ ಖಾತೆ, ಕಂದಾಯ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ 2300 ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿವೆ. ಈ ಪ್ರದೇಶದಲ್ಲಿರುವ ಬಡ ಜನರಿಗೆ ವಸತಿ ಒದಗಿಸುವುದು ಸರ್ಕಾರದ ಗುರಿ.1,80,000 ಮನೆಗಳನ್ನು ರಾಜ್ಯದ್ಯಂತ ಕೊಳಗೇರಿಗಳಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.

ಈಗಾಗಲೇ 35,000 ದಿಂದ 40,000 ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದೆ.ಇನ್ನು 3 ರಿಂದ 4 ತಿಂಗಳಲ್ಲಿ 40,000 ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್, ಶಾಸಕ ಎಂ.ಶ್ರೀನಿವಾಸ್,ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಹೆಚ್. ಎಸ್ ಮಂಜು,ಜಿಲ್ಲಾಧಿಕಾರಿ ಎಸ್.ಅಶ್ವತಿ, ಉಪವಿಭಾಗದಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ಕುಂಇ ಅಹಮದ್ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಡಾ.ಸಿದ್ದರಾಮಯ್ಯ,ಕೊಳಗೇರಿ ಮಂಡಳಿಯ ಇಇ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!