Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾರು ಬಾಡಿಗೆಗೆ ಪಡೆದು ಅಡಮಾನ ಇಡುತ್ತಿದ್ದ ಖದೀಮನ ಬಂಧನ

ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಕಾರುಗಳ ನಂಬರ್ ಪ್ಲೇಟ್ ಬದಲಿಸಿ, ಬೇರೆಯವರಿಗೆ ಅಡಮಾನ ಇಟ್ಟು, ಸಿಕ್ಕ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದ ಕುಮಾರಸ್ವಾಮಿ ಎಂಬಾತನನ್ನು ಹಲಗೂರು ಠಾಣೆ ಪೋಲೀಸರು ಬಂಧಿಸಿ 19 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಹಲಗೂರು ಠಾಣೆಗೆ ದಿನಾಂಕ:15.09.2022 ರಂದು ಪಿರ್ಯಾದುದಾರರಾದ ಪುನೀತ್ ಗೌಡ ಹಾಜರಾಗಿ, ನಾನು ಈಗ್ಗೆ ಎರಡು ತಿಂಗಳ ಹಿಂದೆ ಒಬ್ಬರಿಗೆ ನನ್ನ ಸ್ವಿಫ್ಟ್ ಡಿಸೈರ್ ಕಾರನ್ನು, ಕರಾರು ಮಾಡಿಕೊಂಡು ತಿಂಗಳ ಬಾಡಿಗೆ ಒಪ್ಪಂದದ ಮೇರೆಗೆ ನೀಡಿರುತ್ತೇನೆ.ಆದರೆ ಆತ ಇದುವರೆವಿಗೂ ಬಾಡಿಗೆ ಹಣವನ್ನಾಗಲಿ ಅಥವಾ ನನ್ನ ಕಾರನ್ನಾಗಲೀ ನನಗೆ ನೀಡಿರುವುದಿಲ್ಲ. ಅಲ್ಲದೆ ನನ್ನ ಕಾರಿನ ಹಳದಿ ಬಣ್ಣದ ನಂಬರ್ ಪ್ಲೇಟನ್ನು ಬಿಳಿ ಬಣ್ಣದ ನಂಬರ್ ಪ್ಲೇಟಿಗೆ ಬದಲಾಯಿಸಿ ಬೇರೊಬ್ಬರ ಬಳಿ ಅಡಮಾನ ಇಟ್ಟಿರುವ ಬಗ್ಗೆ ತಿಳಿದು ಬಂದಿರುತ್ತದೆ. ಇದೇ ರೀತಿ ಇನ್ನೂ ಹಲವರಿಗೆ ಮೋಸ ಮಾಡಿರಬಹುದು ಈ ಬಗ್ಗೆ ಕ್ರಮಜರುಗಿಸಬೇಕೆಂದು ದೂರು ನೀಡಿದ್ದರು.

ಆರೋಪಿ ಕುಮಾರಸ್ವಾಮಿ ಪತ್ತೆಗೆ ಹಲಗೂರು ಪೊಲೀಸ್‌ ಠಾಣೆಯ ಪಿಎಸ್‌ಐರವರ ನೇತೃತ್ವದ ತಂಡ ರಚಿಸಲಾಗಿತ್ತು. ಈ ಅಪರಾಧ ಪತ್ತೆ ತಂಡವು ದಿನಾಂಕ: 16.09.2022 ರಂದು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಕುಮಾರಸ್ವಾಮಿ ವಿಚಾರಣೆ ಸಂದರ್ಭದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯಾದ್ಯಂತ ಕಾರುಗಳ ಮಾಲೀಕರುಗಳಿಂದ ಕರಾರು ಒಪ್ಪಂದದ ಮೂಲಕ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ನಂತರ ಮಾಲೀಕರ ಅನುಮತಿ ಇಲ್ಲದೆ ಕಾರುಗಳ ಬಣ್ಣವನ್ನು ಹಾಗೂ ನಂಬರ್ ಪ್ಲೇಟ್ ಬಣ್ಣವನ್ನು ಬದಲಾಯಿಸಿ ಬೇರೆಯವರಿಗೆ ಅಡಮಾನವಿಟ್ಟು ಸಿಕ್ಕಷ್ಟು ಹಣ ಪಡೆದು ಕಾರಿನ ಮಾಲೀಕರುಗಳಿಗೆ ಮೋಸ, ವಂಚನೆ ಮಾಡಿರುವುದು ತಿಳಿದುಬಂದಿದೆ.

ಆರೋಪಿ ಕುಮಾರಸ್ವಾಮಿ ಕಾರು ಮಾಲೀಕರಿಗೆ ಮೋಸ ಮಾಡಿ, ಬೇರೆಯವರಿಗೆ ಅಡಮಾನ ಇಟ್ಟಿದ್ದ 09 ಸ್ವಿಫ್ಟ್ ಡಿಸೈರ್, 02 ಇಂಡಿಕಾ, 01 ಇನೋವಾ, 01 ರಿಟ್ಜ್, 01 ಟವೇರಾ, 01 ಕ್ಬಿಡ್, 01 ಮಹೇಂದ್ರ ಕೆಯುವಿ, 01ಸೆಲೇರಿಯೋ, 01 ಮಾರುತಿ ಆಲ್ಟೋ ಕಾರುಗಳನ್ನು ಮತ್ತು 01 ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್‌ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಇವುಗಳ ಅಂದಾಜು ಮೌಲ್ಯ ಒಂದು ಕೋಟಿ ರೂಗಳಾಗಿದ್ದು, ಆರೋಪಿ ಕುಮಾರಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ