Friday, November 20, 2026

ಪ್ರಾಯೋಗಿಕ ಆವೃತ್ತಿ

ಡಾ.ಪ್ರದೀಪ್ ಕುಮಾರ್ ಹೆಬ್ರಿ ಗೆ ಗೀತ ಅಭಿನಂದನೆ

ಗೀತೆಗಳನ್ನು ಹಾಡಿದ ನಂತರ ಆ ಗೀತೆಗಳ ಬಗ್ಗೆ ಕೇಳಿದ ಶೋತೃಗಳು ವ್ಯಾಖ್ಯಾನ ಮಾಡಿದರೆ ಗೀತೆಗಳ ಬಗ್ಗೆ ತಮ್ಮ ಅಭಿಪ್ರಾಯದ ಮೂಲಕ ವಿಭಿನ್ನ ದೃಷ್ಟಿ ಕಾಣಬಹುದಾಗಿದೆ ಎಂದು ಡಾ.ಪ್ರದೀಪ್ ಕುಮಾರ್ ಹೆಬ್ರಿ ಅಭಿಪ್ರಾಯಪಟ್ಟರು, ಅಲ್ಲದೇ ಪ್ರತಿಯೊಬ್ಬರೂ ತಮಗೆ ಇಷ್ಟವಾಗುವ ವೃತ್ತಿ -ಪ್ರವೃತ್ತಿ ಗಳಲ್ಲಿ ಶ್ರದ್ದೆಯಿಂದ ಸಾಧನೆ ಮಾಡಬೇಕೆಂದರು.

ಮಹಾರಾಷ್ಟ್ರ -ತೆಲಂಗಾಣ -ಗೋವಾ -ಆಂಧ್ರ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಂಧ್ರದ ಮಂತ್ರಾಲಯದ ರಾಘವೇಂದ್ರ ಮಠದ ಆವರಣದಲ್ಲಿ ನಡೆಯುತ್ತಿರುವ “ಪ್ರಥಮ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ “ದ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಡಾ. ಪ್ರದೀಪ್ ಕುಮಾರ್ ಹೆಬ್ರಿಯವರನ್ನು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಅಭಿನಂದಿಸಲಾಯಿತು.

ಸಂಗೀತ ಮನುಷ್ಯನ ಜೀವನದಲ್ಲಿ ಅವಿಬಾಜ್ಯ ಅಂಗವಾಗಿದ್ದು, ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಮನಸ್ಸಿಗೆ ನೆಮ್ಮದಿ ಹಾಗೂ ಮುದ ನೀಡುತ್ತದೆ. ಸಂಗೀತಕ್ಕೆ ಮನಸೋಲದವರು ತೀರಾ ವಿರಳ. ಮಾತಿನಲ್ಲಿ ಹೇಳಲಾಗದ್ದನ್ನು ಸಂಗೀತದ ಮೂಲಕ ಹೇಳಬಹುದು ಎಂದರು.

ದರಸಗುಪ್ಪೆ ಧನಂಜಯ ಮಾತನಾಡಿ ಸರಳ ಜೀವನ ಉದಾತ್ತ ಚಿಂತನೆಯ ಪ್ರತೀಕದಂತಿರುವ, ಸರಳ ಸಜ್ಜನ ಸಾಕಾರಮೂರ್ತಿ ರಾಜ್ಯದ ಹೆಮ್ಮೆಯ ನಮ್ಮೆಲ್ಲರ ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು, ಕವಿತೆ -ಕಥೆ -ಕಾವ್ಯ-ಕಾದಂಬರಿ-ಮಕ್ಕಳ ಸಾಹಿತ್ಯ –ಪ್ರಭಂದ -ಅಂಕಣ ಬರಹ-ವಚನ-ಗಮಕ -ಗ್ರಂಥ ಸಂಪಾದನೆ -ಜೀವನ ಚರಿತ್ರೆ, ಮಹಾ ಕಾವ್ಯ -ಧರ್ಮ ಗ್ರಂಥ -ಉಪನ್ಯಾಸ-ವ್ಯಾಖ್ಯಾನ ಹೀಗೆ, “ಆಡು ಮುಟ್ಟದ ಸೊಪ್ಪಿಲ್ಲದ ರೀತಿ”ಯಲ್ಲಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರಿಗೆ ದೊರೆತಿರುವ ಅವಕಾಶಕ್ಕೆ ಅರ್ಹರು ಎಂದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಜೊತೆಗೆ ಡಾ.ಹೆಬ್ರಿ ರವರವರಿಗೆ ಅವಿನಾಭಾವ ಸಂಬಂಧ ಇದೆ ಎಂಬುದಾಗಿ ಅಕಾಡೆಮಿಯ ಒಡನಾಟದ ಬಗ್ಗೆ ತಿಳಿಸಿದರಲ್ಲದೇ, ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆತಿರುವುದು ಹೆಮ್ಮೆಯ ವಿಷಯ. ಹಾಗಾಗಿ ಡಾ.ಹೆಬ್ರಿ ಯವರಿಗೆ ನಮ್ಮ ಅಕಾಡೆಮಿಯಿಂದ, ಅಭಿಮಾನ ಪೂರ್ವಕವಾಗಿ ವಿಶೇಷವಾಗಿ “ಗೀತ ಅಭಿನಂದನೆ”ಗಳನ್ನು ಅರ್ಪಿಸಲಾಗುತ್ತಿದೆ ಎಂದು ಪ್ರತಿಭಾಂಜಲಿ ಡೇವಿಡ್ ತಿಳಿಸಿದರು.

ಡಾ. ಪ್ರದೀಪ್ ಕುಮಾರ್ ಹೆಬ್ರಿ ರವರಿಗೆ ಇಷ್ಟವಾದ ಕೆಲವು ಗೀತೆಗಳನ್ನು ಹಾಡುವ ಮೂಲಕ “ಗೀತೆ ಅಭಿನಂದನೆ” ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಸಂತೋಷ್, ಧನಂಜಯ, ಅಮೃತಾ, ವಿಸ್ವಾಸ್, ಐಶ್ವರ್ಯ ಹಂಸ, ಶಶಿಕಲಾ, ಸರಿತ, ಭಾರತಿ, ಕರಣ್ ವೀರ್ ಹಾಗೂ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ