Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರದ ನಿಯಮಾವಳಿ ಪ್ರಕಾರ ಪಡಿತರ ವಿತರಣೆ ಮಾಡಿ : ಕೃಷ್ಣಪ್ಪ

ಪಡಿತರ ವಿತರಕರು ಸರಿಯಾಗಿ ಅಂಗಡಿ ತೆಗೆಯುತ್ತಿಲ್ಲ, ಕಾಡ್೯ದಾರರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ವಿಧಾನ ಸಭೆಯಲ್ಲಿ ಪ್ರಸ್ತಾಪ ಗೊಂಡಿದ್ದು ಈ ಬಗ್ಗೆ ಪಡಿತರ ವಿತರಕರು ಎಚ್ಚರ ವಹಿಸಿ ಯಾವುದೇ ದೂರು ಬಾರದಂತೆ ಸರ್ಕಾರದ ನಿಯಮಾವಳಿ ಪ್ರಕಾರ ಪಡಿತರ ವಿತರಣೆ ಮಾಡಬೇಕು ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪತಿಳಿಸಿದರು.

ಮಳವಳ್ಳಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ವಿತರಕರು ಸರಿಯಾಗಿ ಅಂಗಡಿ ತೆಗೆಯುತ್ತಿಲ್ಲ, ಬೆರಳು ಮುದ್ರೆ ತೆಗೆದು ಕೊಂಡ 2-3 ದಿನ ಬಿಟ್ಟು ಅಕ್ಕಿ ಕೊಡುತ್ತಾರೆ, ಅಳತೆಯಲ್ಲೂ ಲೋಪವಾಗುತ್ತಿದೆ, ಕಾಡ್೯ದಾರರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ವಿಧಾನ ಸಭೆಯಲ್ಲಿ ಸಹ ಪ್ರಸ್ತಾಪ ಗೊಂಡಿದ್ದು ಈ ಬಗ್ಗೆ ಪಡಿತರ ವಿತರಕರು ಎಚ್ಚರ ವಹಿಸಿ ಯಾವುದೇ ದೂರು ಬಾರದಂತೆ ಸರ್ಕಾರದ ನಿಯಮಾವಳಿ ಪ್ರಕಾರ ಪಡಿತರ ವಿತರಣೆ ಮಾಡಬೇಕು, ಇಲ್ಲವಾದಲ್ಲಿ ಇಲಾಖೆಯವರ ಕ್ರಮಕ್ಕೆ ಒಳಗಾಗ ಬೇಕಾಗುತ್ತದೆ ಎಂದು ಹೇಳಿದರು.

ಇದಲ್ಲದೆ ಸಗಟು ಮಳಿಗೆಗಳಲ್ಲಿನ ಅಕ್ರಮ ತಡೆಗಟ್ಟಲು ಮಳಿಗೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಎಲೆಕ್ಟ್ರಾನಿಕ್ ತೂಕಯಂತ್ರಗಳನ್ನು ಬಳಸಬೇಕು, ಪಡಿತರ ಸಾಗಾಣಿಕೆ ಲಾರಿಗಗಳಿಗೆ ಜಿಪಿಎಸ್ ಅಳವಡಿಸಿ ಎಂದು ಆಗ್ರಹಿಸಿದ ಅವರು, ಅನ್ನ ಭಾಗ್ಯ ಯೋಜನೆಗೆ ಪ್ರತೀ ತಿಂಗಳು 480 ಕೋಟಿ ಖರ್ಚಾಗುತ್ತಿದ್ದು ಕಿಟ್ ಕೊಟ್ಟರೆ 173 ಕೋಟಿ ಸಾಕು, ಹೀಗೆ ಹಣ ಉಳಿಸಲು ಸರ್ಕಾರ ಆಹಾರ ಕಿಟ್ ವಿತರಣೆಯ ಯೋಜನೆ ರೂಪಿಸಿದ್ದು ಯಾವುದೇ ಕಿಟ್ ಕೊಡಲು ನಮ್ಮ ಅಭ್ಯಂತರ ವೇನು ಇಲ್ಲ ಆದರೆ ತಲಾ 10 ಕೆ ಜಿ ಅಕ್ಕಿ ವಿತರಣೆಯಲ್ಲಿ ಯಾವುದೇ ಕಡಿತವಾಗಬಾರದು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಜೋಷಿ ಅವರ ಜೊತೆ ಕೇಂದ್ರ ಸಚಿವರಾದ ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ಸಹ ಪಾಲ್ಗೊಳ್ಳುತ್ತಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ರಾಜ್ಯಗಳ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಪಡಿತರದಾರರು ಹಾಗೂ ವಿತರಕರ ಹಲವು ಸಮಸ್ಯೆ ಗಳ ಬಗ್ಗೆ ಚೆರ್ಚಿಸುವುದರ ಜೊತೆಗೆ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಭಾರತ್ ರೈಸ್, ಭಾರತ್ ದಾಲ್, ಭಾರತ್ ಗೋಧಿ, ಭಾರತ್ ಹಿಟ್ಟನ್ನು ಕರ್ನಾಟಕಕ್ಕೂ ಪೂರೈಕೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ಈ ಮೊದಲು ‌ರಾಜಕೀಯ ಕಾರಣಗಳಿಂದ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ನಿರಾಕರಿಸಿದ ಪರಿಣಾಮ ರಾಜ್ಯ ಸರ್ಕಾರ ತಲಾ 5 ಕೆ ಜಿ ಅಕ್ಕಿಗೆ ಹಣ ನೀಡುತ್ತಿತ್ತಾದರೂ ಇದು ಸಾಕಷ್ಟು ಪಡಿತರದಾರರಿಗೆ ತಲುಪುತ್ತಿಲ್ಲವಾದ್ದರಿಂದ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಕೇಂದ್ರ ಸರ್ಕಾರ ಹೆಚ್ಚು ವರಿ ಅಕ್ಕಿ ಬಿಡುಗಡೆ ಮಾಡುತ್ತಿದ್ದು ಕಳೆದ ಪೆಬ್ರವರಿಯಿಂದ ಪಡಿತರದಾರರಿಗೆ ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 10 ಕೆ ಜಿ ಅಕ್ಕಿ ನೀಡಲಾಗುತ್ತಿದೆ. ಜೊತೆಗೆ ವಿತರಕರಿಗೂ ಸಹ ಬೇರೆಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಮಿಷನ್ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇದರ ಜೊತೆಗೆ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಎಂಬ ಸಿನಿಮಾವನ್ನು ನಿರ್ಮಿಸಲಾಗಿದ್ದು ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಇದರ ಚಿತ್ರೀಕರಣ ನಡೆಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಪಡಿತರದಾರರಿಗೆ ವಿತರಕರ ಕಥಾ ಅಂಧರವನ್ನು ಒಳಗೊಂಡ ಈ ಸಿನಿಮಾವನ್ನು ಎಲ್ಲಾ ಪಡಿತರದಾರ ಹಾಗೂ ವಿತರಕ ಕುಟುಂಬದವರು ನೋಡಿ ಪ್ರೋತ್ಸಾಹಿಸಬೇಕು ಎಂದು ಟಿ ಕೃಷ್ಣಪ್ಪ ಕೋರಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಡಿ ದೇವ ರಾಜು, ನಿರ್ಧೇಶಕ ಲಿಂಗೇಗೌಡ, ಖಜಾಂಚಿ ಮಂಟೇಸ್ವಾಮಿ, ಗಂಗಾಧರಮೂರ್ತಿ, ನಟರಾಜ ಮೂರ್ತಿ, ಸಂಜೀವ್ ಮೂರ್ತಿ ಮತ್ತಿತರರು ಈ ವೇಳೆ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ