Wednesday, September 18, 2024

ಪ್ರಾಯೋಗಿಕ ಆವೃತ್ತಿ

ದೂರದೃಷ್ಠಿ ಹೊಂದಿದ ನಾಯಕನಿಗೆ ಸಾವಿಲ್ಲ : ಎಲ್.ಸಂದೇಶ್

ಯಾವ ನಾಯಕ ಭವಿಷ್ಯವನ್ನ ಸಮಗ್ರ ಅಭಿವೃದ್ಧಿ ದೃಷ್ಠಿ ಮತ್ತು ದೂರದೃಷ್ಠಿಯಿಂದ ನೋಡುತ್ತಾರೋ ಅವರಿಗೆ ಯಾವತ್ತೂ ಸಾವಿಲ್ಲ ಎಂದು ಪ್ರಗತಿಪರ ವಿಚಾರವಾದಿ ಎಲ್.ಸಂದೇಶ್ ಹೇಳಿದರು.

ಮಂಡ್ಯ ನಗರದಲ್ಲಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನ ತಾಲೂಕು ಶಾಖೆಯಲ್ಲಿ ಆಡಳಿತಮಂಡಳಿ ಆಯೋಜಿಸಿದ್ದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ವರ್ಷದ ಪರಿನಿಬ್ಬಾಣ ದಿನಾಚರಣೆ ಮತ್ತು ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಭಾವಚಿತ್ರಕ್ಕೆ ಪುಷ್ಪ-ದೀಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ದೈಹಿಕವಾಗಿ ಇಲ್ಲದೆ 66 ವರ್ಷಗಳು ಕಳಿದಿವೆ, ಆದರೆ ಸಾಮಾಜಿಕವಾಗಿ ಸದಾ ನಮ್ಮೊಂದಿಗೆ ಇರುತ್ತಾರೆ, ಸಾಧಿಸಿದ ಸಾಧಕರಿಗೆ ಸಾವಿಲ್ಲ, ಅಂಥಹ ಮಹಾಚೇತನರ ಸಾಲಿನಲ್ಲಿ ಮಹಾನಾಯಕರಾಗಿ ಅಂಬೇಡ್ಕರ್ ನಿಲ್ಲುತ್ತಾರೆ ಎಂದು ನುಡಿದರು.

ದೇಶಕ್ಕೆ ಸಮರ್ಪಿಸಿದ ಸಂವಿಧಾನವು ಸ್ವತಂತ್ರ ನಂತರದ ದೇಶದಲ್ಲಿ ಇವತ್ತಿನವರೆಗೂ ಶಾಂತಿ, ಸೌಹಾರ್ದತೆ , ಸಮಾನತೆಯಿಂದ ಬದುಕುವಂತೆ ಮಾಡುತ್ತಿದೆ ಎಂದರೆ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಮ್ಮೆಲ್ಲ ಹಕ್ಕುಗಳನ್ನ ನಾವು ಮಂಡಿಸೋದಿಕ್ಕೆ ಅವಕಾಶವಿದೆ ಎಂದರೆ ಅದರ ಮೂಲ ಪ್ರೇರಣೆ ಅಂಬೇಡ್ಕರ್ ಅವರಾಗಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಬ್ಯಾಂಕ್‌ನ ತಾಲೂಕು ಶಾಖಾ ಆಡಳಿತ ಮಂಡಳಿ ಅಧ್ಯಕ್ಷ ಗುರುಶಂಕರ್ ಮಾತನಾಡಿ, ಮನುಷ್ಯ ಆರ್ಥಿಕ ಕ್ಷೇತ್ರದಲ್ಲಿ ಉಳಿತಾಯ ಮಾಡದಿದ್ದರೆ, ಕಷ್ಠಕರ ಜೀವನ ಎದುರಿಸಬೇಕಾಗುತ್ತದೆ, ದುಡಿಯುವ ವಯಸ್ಸಿನಲ್ಲಿ ಸಣ್ಣ ಉಳಿತಾಯ ಮಾಡುವುದು ಉತ್ತಮ, ಮುಂದಿನ ಭವಿಷ್ಯಕ್ಕೆ ಸಹಕಾರಿ ಯಾಗುತ್ತದೆ ಎಂದು ನುಡಿದರು.

ಅಂಬೇಡ್ಕರ್ ಅವರು ದೇಶಕ್ಕೆ ಆರ್ಥಿಕ ಬೆಳೆವಣಿಗೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಮಾಡಿದರು, ಆರ್ಥಿಕ ಸಬಲೀಕರಣಕ್ಕೆ ಹೊಸ ಐತಿಹ್ಯಕ್ಕೆ ನಾಂದಿಯಾಗಿದರು, ನಮ್ಮ ಬದುಕಿಗಾಗಿ ಅರ್ಥಿಕ ಸಾಕ್ಷರತಾ ಪ್ರಜ್ಞೆಇಲ್ಲದಿದ್ದರೆ ಕಷ್ಠವಾಗುತ್ತದೆ, ಅಂಬೇಡ್ಕರ್ ಆಶಯಲ್ಲಿ ಸಾಗುತ್ತಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನಲ್ಲಿ ಖಾತೆ ತೆರೆಯಿರಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಬ್ಯಾಂಕ್‌ನ ತಾಲೂಕು ಶಾಖಾ ಆಡಳಿತ ಮಂಡಳಿ ಸದಸ್ಯರಾದ ಜಯಶಂಕರ್, ಕುಮಾರ್, ಮುರುಗನ್, ಬಸವರಾಜು, ಸ್ವಾಮಿ, ವಿವೇಕಾನಂದ, ಸರೋಜಾ, ಸೌಭಾಗ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!