Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು| ಪಿ.ಜಿಗೆ ನುಗ್ಗಿ ಚಾಕುವಿನಿಂದ ಇರಿದು ಯುವತಿಯ ಹತ್ಯೆ

ದುಷ್ಕರ್ಮಿಯೊಬ್ಬ ಮಹಿಳಾ ಪಿ.ಜಿ (ವಸತಿ ಗೃಹ) ಗೆ ನುಗ್ಗಿ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಕೋರಮಂಗಲದ ವಿ.ಆರ್ ಲೇಔಟ್‌ನಲ್ಲಿರುವ ಭಾರ್ಗವಿ ಲೇಡೀಸ್ ಹೋಮ್ಸ್‌ನಲ್ಲಿ ಘಟನೆ ನಡೆದಿದೆ. ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ (24) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಯು ಪಿಜಿಯ ಮೂರನೇ ಮಹಡಿಗೆ ಹೋಗಿ ಯುವತಿಗೆ ಚಾಕುವಿನಿಂದ ಇರಿದು, ಪರಾರಿಯಾಗಿದ್ದಾನೆ. ಪಿಜಿಯಲ್ಲಿ ಬಯೋಮೆಟ್ರಿಕ್ ಎಂಟ್ರಿ ವ್ಯವಸ್ಥೆ ಇರುವುದರಿಂದ ಪ್ಯಾಕೇಜ್ ಕೊಡುವ ನೆಪದಲ್ಲಿ ದುಷ್ಕರ್ಮಿ ಪಿಜಿಯೊಳಗೆ ಬಂದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೃತ ಯುವತಿಗೆ ಪರಿಚಿತನಿದ್ದವನಿಂದಲೇ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!