Thursday, September 19, 2024

ಪ್ರಾಯೋಗಿಕ ಆವೃತ್ತಿ

ಎ.ಸಿ. ಶ್ರೀಕಂಠಯ್ಯ ವಿದ್ಯಾಸಂಸ್ಥೆ ಲೋಕಾರ್ಪಣೆ

ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ದಿವಂಗತ ಎ.ಸಿ. ಶ್ರೀಕಂಠಯ್ಯನವರ 25ನೇ ವರ್ಷದ ಪುಣ್ಯ ಸ್ಮರಣಾರ್ಥ ನೀಲಾಂಚಲ ಟ್ರಸ್ಟ್ ನಿರ್ಮಿಸಿರುವ, ಎ.ಸಿ ಶ್ರೀಕಂಠಯ್ಯ ವಿದ್ಯಾಸಂಸ್ಥೆಯನ್ನು ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಲೋಕಾರ್ಪಣೆಗೊಳಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕೆ.ಶೆಟ್ಟಹಳ್ಳಿ ಸುರೇಶ್ ರವರು ನಮ್ಮ ತಂದೆಯವರ ಪರಮಾಪ್ತರಾಗಿದ್ದು, ಅವರ 25ನೇ ವರ್ಷದ ಪುಣ್ಯ ಸ್ಮರಣಾರ್ಥ ನಿರ್ಮಿಸಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿರುವುದು ನಮ್ಮ ಭಾಗ್ಯ.

ಸಮಾಜದ ಸುಧಾರಣೆಗೆ ಶಾಲೆ ಆರಂಭಿಸಿರುವ ಸುರೇಶ್ ರವರು ನಮ್ಮ ತಂದೆಯವರ ಹೆಸರಿಟ್ಟು ಅವರಿಗೆ ಗೌರವ ಸೂಚಿಸುತ್ತಿರುವುದು ನನಗೆ ಬಹಳ ಸಂತಸ ತಂದಿದೆ ಎಂದರು.

ತಾಲ್ಲೂಕಿನ ಮಕ್ಕಳಿಗೆ ಉತ್ತಮ ಪ್ರಾಥಮಿಕ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ಎ.ಸಿ.ಶ್ರೀಕಂಠಯ್ಯ ಅವರ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯುವ ಮೂಲಕ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟಿರುವುದು ಅವರು ಶಿಕ್ಷಣಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ಮೈಸೂರಿನ ನುರಿತ ಬೋಧಕ ವರ್ಗ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಶಾಲೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.

ಇದನ್ನು ಓದಿ: ಎ.ಸಿ.ಶ್ರೀಕಂಠಯ್ಯ ಸ್ಮರಣಾರ್ಥ ಹಣ್ಣು-ಹಂಪಲು ವಿತರಣೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!