Saturday, July 13, 2024

ಪ್ರಾಯೋಗಿಕ ಆವೃತ್ತಿ

ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹಕರ ದುರ್ಮರಣ 

ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಸ್ಟುಡಿಯೋ ಮುಂದೆ ನಾಮಫಲಕ ಅಳವಡಿಸಲು ಹೋದ ಇಬ್ಬರು ಛಾಯಾಗ್ರಾಹಕರಿಗೆ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದ ಎಂ.ವಿವೇಕ್, ಗೆಜ್ಜಲಗೆರೆ ಮಧುಸೂಧನ್ ಎಸ್. ಎಂಬ ಛಾಯಾಗ್ರಾಹಕರೇ ಪ್ರಾಣ ಕಳೆದು ಕೊಂಡವರು. ಬೆಸಗರಹಳ್ಳಿಯಲ್ಲಿರುವ ತಮ್ಮ ಲಕ್ಷ್ಮಿ ಸ್ಟುಡಿಯೋ ಮುಂದೆ ನಾಮಫಲಕವನ್ನ ಹಾಕಲು ಹೋದಾಗ ವಿದ್ಯುತ್ ಶಾಕ್ ತಗುಲಿದೆ.

ತಕ್ಷಣವೇ ಇಬ್ಬರನ್ನು ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕುಟುಂಬಸ್ಥರು, ಮಾಂಡವ್ಯ ಛಾಯಾಗ್ರಾಹಕರ ಸಂಘದ ಸಂತಾಪ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!