Monday, November 23, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ : ಮಾಲುಗಳ ವಶ

ನಾಗಮಂಗಲ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಳವು ಮಾಡಿದ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 1.40ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಚಂದ್ರಶೇಖರಪುರ ಹೋಬಳಿಯ ಚಂಗಾವಿ ಗ್ರಾಮದ ಆರೋಪಿ ಆಟೋ ಚಾಲಕನಾದ ಭೀಮೇಶ ಆಲಿಯಾಸ್ ಬೀಮ ಬಿನ್ ವೆಂಕಟನರಸಯ್ಯ (34)ನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ಕಳ್ಳರು ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ದೇವರಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ದೇವಾಲಯಗಳ ಬಾಗಿಲು ಮುರಿದು ಪಟ್ಟಲದಮ್ಮ ದೇವರ ಮೇಲೆ ಹಾಕಿದ್ದ ಬೆಳ್ಳಿಯ ಛತ್ರಿಗಳು-03, ದೇವರ ಮುಖಸಿರಿ-03, ಬೆಳ್ಳಿ ಕಿರೀಟ -02, ಬೆಳ್ಳಿ ದೇವಸ್ಥಾನದಲ್ಲಿದ್ದ ಚಿನ್ನದ ಕಾಸು-02, ತಾಳಿ-01. ಗುಂಡು-04. ಮೂಗುತಿ-02 ಮತ್ತು ಹೊನ್ನದೇವಿ ದೇವಸ್ಥಾನದಲ್ಲಿದ್ದ ಚಿನ್ನದ ತಾಳಿ-02, ಚಿನ್ನದ ಗುಂಡು-16 ಮತ್ತು ಹುಂಡಿಯ ಹಣವನ್ನು ಮತ್ತು ಹುಚ್ಚಮ್ಮನ ದೇವಸ್ಥಾನದಲ್ಲಿ ಹುಂಡಿಯ ಹಣವನ್ನು ಕಳವು ಮಾಡಿದ್ದರು.

ಈ ಬಗ್ಗೆ ಕಳೆದ ಡಿ.3ರಂದು ನರಸಿಂಹಯ್ಯ ಎಂಬುವವರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ  ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಮಂಡ್ಯ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ನಾಗಮಂಗಲ ಪೋಲೀಸ್ ಉಪಾಧೀಕ್ಷಕರಾದ ಚಲುವರಾಜು ಅವರ ಮಾರ್ಗದರ್ಶನದಲ್ಲಿ ನಾಗಮಂಗಲ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಸ್.ನಿರಂಜನ್ ನೇತೃತ್ವದಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್‌ಐ. ಜಿ.ರಾಜೇಂದ್ರ, ಎ.ಎಸ್.ಐ ಚನ್ನಬಸವಯ್ಯ, ಸಿಬ್ಬಂದಿಯವರಾದ ಇಂದ್ರಕುಮಾರ್, ಪ್ರಶಾಂತ್ ಕುಮಾರ್, ಸಿದ್ದಪ್ಪ, ಕಿರಣ್ ಕುಮಾರ್, ಈಶ್ವರ್, ಮಂಜುನಾಥ ಗುಗ್ಗರಿ, ಉಮೇಶ್, ಕೃಷ್ಣ, ನಿರ್ಮಲ, ರವಿಕಿರಣ್, ಲೋಕೇಶ್, ಚೇತನ್, ರವಿ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದೆ.

ಆರೋಪಿಯಿಂದ ಕಳ್ಳತನ ಮಾಡಿದ್ದ ಒಟ್ಟು 3 ಕೆ.ಜಿ. ಬೆಳ್ಳಿ ಆಭರಣಗಳು, ಮತ್ತು 1,540 ರೂ ನಗದು ಹಣ ಸೇರಿದಂತೆ ಒಟ್ಟು 1,48 ಲಕ್ಷ ರೂ. (ಒಂದು ಲಕ್ಷದ ನಲವತ್ತೆಂಟು ಸಾವಿರ) ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ  ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಒಂದು ಹೋಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಾನ್ಯ ಮಂಡ್ಯ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿ ಪ್ರಶಂಸಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ