Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ- ಸುಮಲತಾ ಒಡನಾಟ: ಕಾರ್ಯಕರ್ತರು ಕಲಿಯಬೇಕಿದೆ ಪಾಠ

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕೀಳು ಮಟ್ಟದ ಭಾಷೆಯ ಮೂಲಕ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ಬಣಗಳು ಅಂದು ಕಿತ್ತಾಡಿಕೊಂಡಿದ್ದವು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ತಮ್ಮ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂದು ಮತ್ತೆ ಒಂದಾಗಿದ್ದಾರೆ.

ಕುಮಾರಸ್ವಾಮಿ ಜೊತೆ ಸುಮಲತಾ ಅವರು ರಾಜಕೀಯ ಸ್ವಾರ್ಥಕ್ಕಾಗಿ ಪರಸ್ಪರ ಕೈ ಜೋಡಿಸಿದ್ದು, ಇವರಿಬ್ಬರ ಒಡನಾಟದಿಂದ ಎರಡೂ ಬಣಗಳ ಕಾರ್ಯಕರ್ತರು ಒಂದು ಪಾಠ ಕಲಿಯಬೇಕಾಗಿದೆ. ಹಳ್ಳಿಗಳಲ್ಲಿ ತಮ್ಮ ರಾಜಕೀಯ ನಾಯಕರ ಪರವಾಗಿ ಗುದ್ದಾಡುವ, ಬಡಿದಾಡುವ, ಕೇಸು, ಪೋಲಿಸು, ಕೋರ್ಟು,‌ಜೈಲು ಎಂದೆಲ್ಲಾ ಬಾಳುಗೆಡುವ ಕಾರ್ಯಕರ್ತರಿಗೆ ಒಂದು ಒಳ್ಳೆಯ ಪಾಠವಿದೆ.

ಕೀಳುಮಟ್ಟದ ಭಾಷೆ ಪ್ರಯೋಗ

ಮೇಲ್ಮಟ್ಟದಲ್ಲಿ ನಾಯಕರು ಒಂದಾದರೆ ತಳಮಟ್ಟದಲ್ಲಿ ಒಂದಾಗಲು ಬಹುತೇಕ ಕಾರ್ಯಕರ್ತರಿಗೆ ಸಾಧ್ಯವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ರೊಚ್ಚಿಗೆದ್ದು ಸುಮಲತಾ ಅಂಬರೀಶ್ ಮೇಲೆ ಕೆಟ್ಟದಾಗಿ ಬೈಗುಳಗಳ ಸುರಿಮಳೆಯನ್ನೇ ಸುರಿಸಿದ್ದರು. ಜೆಡಿಎಸ್ ನಾಯಕರೇ ಕೆಟ್ಟದಾಗಿ ಮಾತನಾಡುವಾಗ ಕಾರ್ಯಕರ್ತರು ಸುಮ್ಮನಿರುತ್ತಾರಾ? ಅವರು ಕೂಡ ಕೀಳುಮಟ್ಟದ ಭಾಷೆ ಪ್ರಯೋಗಿಸಿದ್ದರು. ಇದರಿಂದ ಎರಡೂ ಬಣಗಳ ಕಾರ್ಯಕರ್ತರು ಸಾಮಾಜಿಕ ತಾಣಗಳಲ್ಲಿ, ಬಹಿರಂಗವಾಗಿ ಬಾಯಿಗೆ ಬಂದ ಹಾಗೆ ಕಿತ್ತಾಡಿಕೊಂಡಿದ್ದರು.

ಈಗ ಇದನ್ನೆಲ್ಲ ಕುಮಾರಸ್ವಾಮಿ ಹಾಗೂ ಸುಮಲತ ಮರೆತಿರಬಹುದು. ಆದರೆ ತಳ ಮಟ್ಟದಲ್ಲಿ‌ ಎರಡೂ ಬಣಗಳ ಕಾರ್ಯಕರ್ತರು ಒಂದಾಗಲು ಸಾಧ್ಯವಿಲ್ಲ. ಇದಕ್ಕೆ ‌ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಸ್ಪರ್ಧೆ. ಹಾಗಾಗಿ ಮೇಲ್ಮಟ್ಟದಲ್ಲಿ ಮೈತ್ರಿ ಆದರೂ ತಳಮಟ್ಟದಲ್ಲಿ ಕಾರ್ಯಕರ್ತರು ಒಂದಾಗದ ಕಾರಣ ನಿಖಿಲ್ ಕುಮಾರಸ್ವಾಮಿ ಸೋಲು ಕಂಡರು.

ಮೈತ್ರಿಗಳಿಂದ ಪಾಠ ಕಲಿಯಬೇಕಿದೆ

ಹಲವು ದಶಕಗಳಿಂದ ಪರಸ್ಪರ ಗುದ್ದಾಡಿಕೊಂಡು ಕೇಸು, ಕೋರ್ಟು, ಜೈಲು ಎಂದೆಲ್ಲ ಅಲೆದಾಡುವ ಕಾರ್ಯಕರ್ತರು ಕೂಡ ಇಂತಹ ಮೈತ್ರಿಗಳಿಂದ ನಿಜಕ್ಕೂ ಪಾಠ ಕಲಿಯಬೇಕಿದೆ.ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ, ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ಬಗ್ಗೆ ವಾಚಾಮಗೋಚರವಾಗಿ ತೆಗಳಿದ್ದರು. ಅಂತಹ ಕುಮಾರಸ್ವಾಮಿ ಕನಿಷ್ಠ ಬದ್ಧತೆ ಇಲ್ಲದಂತೆ ತಮ್ಮ ಸ್ವಾರ್ಥಕ್ಕಾಗಿ,ಹಣ,ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈ ಜೋಡಿಸಿದ್ದು,ರಾಜಕಾರಣದಲ್ಲಿ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿಯಬಹುದಾ ಎನಿಸುತ್ತದೆ.

ಈಗ ಕುಮಾರಸ್ವಾಮಿ ಮತ್ತು ಸುಮಲತಾ ಕೈ ಜೋಡಿಸಿದ್ದಾರೆ.ಇದೇ ರೀತಿ ಹಲವು ನಾಯಕರು ಕೈ ಜೋಡಿಸಿದ ಇತಿಹಾಸ ನಾವು ನೋಡಿದ್ದೇವೆ.ಇವರ ಸ್ವಾರ್ಥ ರಾಜಕಾರಣಕ್ಕಾಗಿ ಬಣ ಬಡಿದಾಟದಲ್ಲಿ ಗುದ್ದಾಡಿಕೊಂಡು ಕೇಸು,ಪೋಲಿಸು,ಕೋರ್ಟಿ,ಜೈಲು ಎಂದೆಲ್ಲ ಅಲೆದಾಡಿದ ಕಾರ್ಯಕರ್ತರು ನಿಜಕ್ಕೂ ಪಾಠ ಕಲಿಯಬೇಕಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!