Wednesday, May 15, 2024

ಪ್ರಾಯೋಗಿಕ ಆವೃತ್ತಿ

ಉಪವಿಭಾಗಾಧಿಕಾರಿ ಕೀರ್ತನಗೆ ಪದ್ಮ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ

ವರದಿ : ಅನುಪಮ ಸತೀಶ್

ನಾವು ಬೆಳೆಯುವುದರ ಜೊತೆಗೆ ನಮ್ಮ ಸುತ್ತ-ಮುತ್ತಲಿನವರನ್ನು ಬೆಳೆಸುವ ಮನೋಭಾವನೆಯನ್ನು ಹೊಂದಿದಾಗ ಮಾತ್ರ ದೇಶದ ಸಂಪನ್ಮೂಲ ಹೆಚ್ಚಿಸಲು ಸಾಧ್ಯ ಎಂದು ಮಂಡ್ಯ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನ ತಿಳಿಸಿದರು.

ಭಾರತೀನಗರದ ಭಾರತೀ ಕಾಲೇಜು ಕುವೆಂಪು ಸಭಾಂಗಣದಲ್ಲಿ ಪದ್ಮ ಜಿ.ಮಾದೇಗೌಡ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ 9ನೇ ವರ್ಷದ ಪದ್ಮಾ ಜಿ.ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದೆ ಗುರಿ ಹಿಂದೆ ಗುರು’ ಇದ್ದಾಗ ಮಾತ್ರ ಎಲ್ಲರೂ ಬೆಳೆಯಲು ಸಾಧ್ಯವಾಗುತ್ತದೆ. ಭಾರತೀ ಕಾಲೇಜಿನ ಸುತ್ತ-ಮುತ್ತಲಿನ ನೂರಾರು ಹಳ್ಳಿಗಳ ಪ್ರತೀ ಮನೆಯಲ್ಲೂ ಒಂದು ಹೆಣ್ಣು ಮಗುವಾದರು ವಿದ್ಯಾವಂತರಿದ್ದಾರೆ. ಶೇ 70 ರಷ್ಟು ಭಾರತೀ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ. ಇವರನ್ನು ಸಬಲರನ್ನಾಗಿ ಮಾಡುವುದರಲ್ಲಿ ವಿದ್ಯಾಸಂಸ್ಥೆ ಯಶಸ್ವಿಗೊಳ್ಳುತ್ತಿದೆ ಎಂದರು.

ದಿ.ಜಿ.ಮಾದೇಗೌಡರು ಕ್ರೀಯಾಶೀಲರಾಗಿ ಸಕ್ರೀಯವಾಗಿ ಕೆಲಸ ಮಾಡಲು ಪದ್ಮ ಜಿ. ಮಾದೇಗೌಡರು ಬೆನ್ನೆಲುಬಾಗಿ ನಿಂತಿದ್ದರಿಂದ ಹಲವಾರು ಸಾಧನೆ ಮಾಡಲು ಸಾಧ್ಯವಾಯಿತೆಂದು ಬಣ್ಣಿಸಿದ ಅವರು, ಪದ್ಮ ಜಿ. ಮಾದೇಗೌಡರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನಗೆ ಬಹಳಷ್ಟು ಸಂತಸ ತಂದಿದೆ. ಅವರ ಸೇವೆ ಹೀಗೆ ಮುಂದುವರೆಯಲಿ. ಅವರಿಂದ ಸೇವೆ ಪಡೆದುಕೊಳ್ಳುವಂತಹ ಭಾಗ್ಯ ಮತ್ತಷ್ಟು ಜನರಿಗೆ ಲಭ್ಯವಾಗಲಿ ಎಂದು ಆಶಿಸಿದರು.

ಆತ್ಮಗೌರವವನ್ನು ಬೆಳೆಸಿಕೊಳ್ಳಿ
ಜೆಎಸ್ಎಸ್ ಸ್ನಾತ್ತಕೋತ್ತರ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಕುಮುದಿನಿ ಅಚ್ಚಿ ಮಾತನಾಡಿ, ಹೆಣ್ಣು ಮಕ್ಕಳು ಆತ್ಮಗೌರವವನ್ನು ಬೆಳೆಸಿಕೊಳ್ಳಬೇಕು. ಶಕ್ತಿಸಾಲಿಯಾಗಿ ಹೊರಬೇಕು. ನಮ್ಮ ಮೇಲೆ ನಾವೇ ನಿಯಂತ್ರಣ ಹೊಂದುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಸಿನಲ್ಲಿ ಇರುವ ಛಲದ ಪ್ರತಿಭೆಯನ್ನು ಹೊರತೆಗೆದಾಗ ಮಾತ್ರ ನಾವು ಪ್ರಗತಿ ಸಾಧಿಸಲು ಸಾಧ್ಯ. ಐಎಎಸ್, ಕೆಎಎಸ್ ತರಬೇತಿಯನ್ನು ಭಾರತೀ ವಿದ್ಯಾಸಂಸ್ಥೆ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸಾಧನೆ ಮಾಡಿದಾಗ ಮಾತ್ರ ದಿ.ಜಿ.ಮಾದೇಗೌಡರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.

ಮಹಿಳೆಯರಿಗಾಗಿ ಹಲವಾರು ದಿನಾಚರಣೆಗಳು ಬರುತ್ತಿದೆ. ಆಗಾಗಿ ಮಹಿಳೆಯರು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಪ್ರಸ್ತುತ ಪುರುಷರು ಬಹಳಷ್ಟು ಹಿಂದುಳಿಯುತ್ತಿರುವುದರಿಂದ ಪುರುಷರ ದಿನಾಚರಣೆಯನ್ನು ಆಚರಿಸುವಂತಹ ಕೆಲಸಗಳು ಮುಂದಿನ ದಿನಗಳಲ್ಲಿ ನಡೆಯಬೇಕಾಗಿದೆ ಎಂದರು.

ಮೊಬೈಲ್ನಿಂದ ಬಹಳಷ್ಟು ಮಂದಿ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೊಬೈಲ್ನಿಂದ ಸಾಕಷ್ಟು ದೂರವಿರುವುದು ಒಳ್ಳೆಯ ಬೆಳೆವಣಿಗೆ. ತಾಯಂದಿರು ಗಂಡು ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸಬೇಕು. ಹೆಣ್ಣು ಮಕ್ಕಳು ಸಹ ಚಂಚಲ ಮನಸ್ಸನ್ನು ಬಿಡಬೇಕು ಎಂದರು.

ತಾರತಮ್ಯ ಬಿಡಬೇಕು
ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎಚ್.ಎಂ.ವಸಂತಮ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಹೆಣ್ಣು ಜನಿಸಿದರೆ ಮನೆಗೆ ಲಕ್ಷ್ಮಿ ಬಂದಂತೆ. ಗಂಡು-ಹೆಣ್ಣು ಎಂಬ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು. ಆಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ. ನಾವು ಒಳ್ಳೆಯವರಾದರೆ ನಮ್ಮನ್ನು ನೋಡಿ ಬೆರೆಯವರು ಒಳ್ಳೆಯವರಾಗುತ್ತಾರೆ. ಹೆಣ್ಣು-ಗಂಡಿನಲ್ಲಿ ಸಾಮರಸ್ಯ ಜೀವನ ಇರಬೇಕೇ ಹೊರತು ಮೇಲುಕೀಳು ಇರಬಾರದು. ಅತ್ತೆ-ಮಾವರನ್ನು ತಂದೆ-ತಾಯಿಗಳಂತೆ ಗೌರವಿಸುವುದನ್ನು ನಾವು ಸಹ ಕಲಿಬೇಕೆಂದರು.

ಪದ್ಮಾ ಜಿ. ಮಾದೇಗೌಡ ಪ್ರತಿಷ್ಠಾನ ಅಧ್ಯಕ್ಷ ಬಿ.ಎಂ ನಂಜೇಗೌಡ ಪ್ರಾಸ್ತಾವಿಕ ಭಾಷಣ ಮಾತನಾಡಿದರು.
ಇದೇ ವೇಳೆ ಎಸಿ ಎಚ್.ಎಸ್.ಕೀರ್ತನ ಅವರಿಗೆ 25 ಸಾವಿರ ನಗದು, ಸ್ಮರಣಿಕೆಯುಳ್ಳ 9ನೇ ವರ್ಷದ ಪದ್ಮಾ ಜಿ. ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಡಾ.ಕುಮುದಿನಿ ಅಚ್ಚಿ ಹಾಗೂ ಡಾ.ಎಚ್.ಎಸ್.ವಸಂತಮ್ಮ ಅವರನ್ನು ಅಭಿನಂದಿಸಲಾಯಿತು.

ಬಹುಮಾನ ವಿತರಣೆ
ಅಂತರ ಕಾಲೇಜು ರಸ ಪ್ರಶ್ನೆ ಸ್ಪಧರ್ೆ ಹಾಗೂ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯಲಕ್ಷ್ಮಿ ಬಾಳೇಕುಂದ್ರಿ, ಕೆ.ಎಸ್.ಭಾರತಿ ಅವರ ಹೆಸರಿನಲ್ಲಿ ದತ್ತಿ ನಿಧಿ ಬಹುಮಾನ ನೀಡಲಾಯಿತು.
ಹಿರಿಯ ವಿದ್ಯಾಥರ್ಿ ರವಣಿ ಆರ್.ಜೆ.ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಬಡ ವಿದ್ಯಾಥರ್ಿಗಳಿಗೆ 2ಲಕ್ಷ ರೂಗಳನ್ನು ನೆರವು ನೀಡಲಾಯಿತು.

ವೇದಿಕೆಯಲ್ಲಿ ಪದ್ಮಜಿಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಧು ಜಿ. ಮಾದೇಗೌಡ, ಟ್ರಸ್ಟಿಗಳಾದ ಆಶಯ್ ಮಧು ಮಾದೇಗೌಡ, ಬಿ. ಬಸವರಾಜು, ಸಿದ್ದೇಗೌಡ, ಮುದ್ದೇಗೌಡ, ಬಸವೇಗೌಡ, ಜಯರಾಮ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!