Friday, September 20, 2024

ಪ್ರಾಯೋಗಿಕ ಆವೃತ್ತಿ

ಹರ್ಡಿಕರ್ ಭವನ ಅಭಿವೃದ್ಧಿಗೆ ನೆರವು; ಶಾಸಕ ರವಿಕುಮಾರ್

ಸಮಾಜ ಸೇವೆ ವೃದ್ಧರಿಗೆ ಸಾಂತ್ವನ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಾಜಸೇವಕ ಜಿ ವಿ ನಾಗರಾಜು ಅವರ ನೇತೃತ್ವದ ಹರ್ಡೀಕರ್ ಭವನದ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕೆ ನೆರವು ನೀಡುವುದಾಗಿ ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು

ಸೆಂಟ್ ಜಾನ್ ಆಂಬುಲೆನ್ಸ್ ಮಂಡ್ಯ, ಭಾರತ ಸೇವಾದಳ ಇವರ ಸಮುಕ್ತಾಶ್ರಯದಲ್ಲಿ ಮಂಡ್ಯ ನಗರದ ಹರ್ಡೀಕರ್ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಅಭಿನಂದನೆ, ಧನಸಹಾಯ ಮತ್ತು ಡಾ.ವೈ.ಎಸ್ . ರಾಮರಾವ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯವಾಗಿದ್ದು, ಇದಕ್ಕೆ ಪೂರಕವಾಗಿ ಶ್ರಮಿಸುತ್ತಿರುವ ಜ.ವಿ .ನಾಗರಾಜು ಅವರ ಕಾರ್ಯ ಶ್ಲಾಘನೀಯ ಎಂದರು.

ಹರ್ಡೀಕರ್ ಭವನಕ್ಕೆ ತಮ್ಮ ಭೇಟಿ ಪ್ರಥಮವಾಗಿದ್ದು ಮುಂದಿನ ದಿನಗಳಲ್ಲಿ ಕಟ್ಟಡದ ಉನ್ನತಿಕರಣಕ್ಕೆ ಸಂಬಂಧಿಸಿದಂತೆ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದರು.

ಡಾ. ವೈ ಎಸ್ ರಾಮರಾವ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಸಚಿವ ಆತ್ಮಾನಂದ ಅವರು, ಪ್ರಶಸ್ತಿಗೆ ಭಾಜನರಾದ ವರಹಾ ವಿಠಲದಾಸರು ಅತ್ಯಂತ ಅರ್ಹರಾಗಿದ್ದು, ಇಂದಿನ ಸಮಾರಂಭ ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಜಿ ವಿ ನಾಗರಾಜು, ವೃದ್ಧಾಶ್ರಮ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿರುವ ಸೇವಾ ಕಿರಣ ಟ್ರಸ್ಟ್ ನ ಎಲ್ಲಾ ಸೇವಾ ಕಾರ್ಯಗಳು, ಬಿ.ಸಿ. ಶಿವಾನಂದ ಅವರ ಕಾಳಜಿಯ ಪ್ರತೀಕವಾಗಿದೆ ಎಂದರು.

ಭಾರತ ಸೇವಾದಳದ ಅಧ್ಯಕ್ಷ ಬಿಸಿ ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು.

ವೇದಿಕೆಯಲ್ಲಿ ಸೇವಾದಳ ಕೇಂದ್ರ ಸಮಿತಿಯ ಸದಸ್ಯ ವೈ .ಬಿ .ಬಸವರಾಜು ಕಾಂಗ್ರೆಸ್ ಯುವ ಮುಖಂಡ ಎಂ.ಎಸ್ .ಚಿದಂಬರ್ , ಚಿತ್ರನಟ ಅಂಜನಪ್ಪ, ಸೆಂಟ್ ಜಾನ್ ಅಂಬುಲೆನ್ಸ್ ಸಂಸ್ಥೆಯ ಖಜಾಂಚಿ ವಕೀಲ ಸಜ್ಜನ್ ರಾಜ್ ಕೊಠಾರಿ, ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್ ಮುಂತಾದವರು ಭಾಗವಹಿಸಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ನಗರಸಭಾ ಸದಸ್ಯ, ಗಾಯಕ ಎಂ.ಎನ್. ಶ್ರೀಧರ್, ಜಿ ವಿ ಕುಮಾರ್, ಕಿರುತೆರೆ ನಟ ಮಂಡ್ಯ ಸತ್ಯನ್.  ಶಿಕ್ಷಣ ಕ್ಷೇತ್ರದಿಂದ ಸಿ ಸ್ವಾಮಿ,, ಜೆಡಿಎಸ್ ಮುಖಂಡರಾದ ನೀನಾ ಪಟೇಲ್, ಆಯೇಷಾ ತಬಸಂ, ಡಾ. ಅನಘ, ಹೋರಾಟಗಾರ್ತಿ ರಜನಿ ರಾಜ್ ಹಾಗೂ ಶಿಕ್ಷಕ ರವಿಕಿರಣ್ ಮದ್ದೂರು ಅವರನ್ನು ಅಭಿನಂದಿಸಲಾಯಿತು. ನೇತ್ರಾವತಿ ಮತ್ತು ತಂಡದಿಂದ ನಾಡಗೀತೆ ಗಾಯನ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!