Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಖಿಲ ಕರ್ನಾಟಕ ಹವ್ಯಾಸಿ ಕಲಾವಿದರ ನಾಟಕ ಸ್ಪರ್ಧೆ

ಪ್ರಕಾಶ್ ಕಲಾಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ಡಿಸೆಂಬರ್ ನಲ್ಲಿ ನಡೆಸಲಾಗುತ್ತಿದ್ದ ಕೆ.ವಿ.ಶಂಕರಗೌಡರ ಸ್ಮರಣಾರ್ಥ 15ನೇ ವರ್ಷದ ಅಖಿಲ ಕರ್ನಾಟಕ ನಾಟಕಗಳ ಸ್ಪರ್ಧೆಯನ್ನು ಕಾರಣಾಂತರಗಳಿಂದ ಮುಂಬರುವ ಜನವರಿಯಲ್ಲಿ ನಡೆಸಲಾಗುವುದು ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ಹೆಚ್.ಎಸ್.ಮುದ್ಧೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹವ್ಯಾಸಿ ತಂಡಗಳು ನಿಯಮ-ನಿಬಂಧನೆಗೊಳಪಟ್ಟು ಪ್ರವೇಶ ಪತ್ರಗಳನ್ನು ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಪ್ರಥಮ ಬಹುಮಾನವಾಗಿ 30 ಸಾವಿರ ರೂ. ನಗದು, ದ್ವಿತೀಯ ಬಹುಮಾನವಾಗಿ 25 ಸಾವಿರ ರೂ., ತೃತೀಯ ಬಹುಮಾನವಾಗಿ 20 ಸಾವಿರ ರೂ., ಹಾಗೂ ಮೆಚ್ಚುಗೆ ಬಹುಮಾನ ವಾಗಿ ಎರಡು ತಂಡಗಳಿಗೆ  2 ಸಾವಿರ ರೂ.ಗಳನ್ನು ನೀಡಲಾಗುವುದು. ಡಿ.26, 2022 ಪ್ರವೇಶಪತ್ರ ಕಳುಹಿಸಲು ಕೊನೆಯ ದಿನವಾಗಿದೆ ಎಂದರು.

ಹೆಚ್ಚಿನ ವಿವರಗಳಿಗೆ ಪಿ.ವೆಂಕಟರಾಮಯ್ಯ, ಪ್ರಧಾನ, ಕಾವ್ಯದರ್ಶಿ, ಪ್ರಕಾಶ್‌ ಕಲಾಸಂಘ, 2ನೇ ಮುಖ್ಯ ರಸ್ತೆ, ಆಶೋಕನಗರ, ಮಂಡ್ಯ ನಗರದ ಮೊ.8310331878, 9481677088 ಸಂಪರ್ಕಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವೆಂಕಟರಾಮಯ್ಯ, ಕೆ.ಟಿ.ಶಂಕರೇಗೌಡ, ಬಿ.ಜಿ.ಉಮಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!