Friday, October 18, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭಾ ಚುನಾವಣೆ | ₹ 1.16 ಕೋಟಿ ವೆಚ್ಚದ ಮದ್ಯ-ಗಾಂಜಾ ವಶ ; 454 ಆರೋಪಿಗಳ ಬಂಧನ

ಫೆ.18ರಿಂದ ಏ.16ರವರೆಗೆ ಅಬಕಾರಿ ಇಲಾಖೆ ವತಿಯಿಂದ 1ಕೋಟಿ 16 ಲಕ್ಷದ ಎಪ್ಪತ್ತಾಲ್ಕು ಸಾವಿರದ ಇನ್ನೂರ ತೊಂಬತ್ನಾಲ್ಕು ರೂ. ಮೌಲ್ಯದ ಮದ್ಯ, ಗಾಂಜಾ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡು 454 ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಅಬಕಾರಿ ಜಿಲ್ಲಾಧಿಕಾರಿ ಅವರು, ವಿವಿದೆಡೆ ದಾಳಿ ನಡೆಸಿ 97 ಘೋರ ಮೊಕದ್ದಮೆಗಳು, ಕಲಂ 15(ಎ) ಅಡಿಯಲ್ಲಿ 435, ಸನ್ನದು ಷರತ್ತು ಉಲ್ಲಂಘನೆ‌ ಅಡಿಯಲ್ಲಿ 135 ಹಾಗೂ 2 ಎನ್’ಡಿಪಿಎಸ್ ಪ್ರಕರಣಗಳಲ್ಲಿ 7 ಗಾಂಜಾ ಗಿಡ ಮತ್ತು 850 ಗ್ರಾಂ ಒಣ ಗಾಂಜಾ ಮತ್ತು 30 ಲೀ. ಸೆಂದಿ ಸೇರಿ 669 ಪ್ರಕರಣಗಳನ್ನು ದಾಖಲಿಸಿ 454 ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ವಿವಿಧ ಪ್ರಕರಣಗಳಲ್ಲಿ ಒಟ್ಟು 8,019 ಲೀ ಮದ್ಯ ಹಾಗೂ 21,159 ಲೀ ಬಿಯರ್ ಜಪ್ತಿ‌ ಮಾಡಿ‌ 61 ದ್ವಿಚಕ್ರ ವಾಹನ ಮತ್ತು 3 ನಾಲ್ಕು ಚಕ್ರದ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ಮಾರಾಟ ಹಾಗೂ ಅಕ್ರಮವಾಗಿ ಮದ್ಯ ತಯಾರಿಕಾ ವಸ್ತುಗಳು ಮತ್ತು ಗಾಂಜಾ ಅಪೀಮು ಡ್ರಗ್ಸ್ ಹಾಗೂ ಇನ್ನಿತರ ಯಾವುದೇ ಮಾದಕ ವಸ್ತುಗಳ ಬಗ್ಗೆ ದೂರುಗಳಿದ್ದಲ್ಲಿ ಟೋಲ್ ಫ್ರಿ‌ ನಂಬರ್ 18004253854 ಗೆ ಕರೆ ಮಾಡುವಂತೆ ವಿನಂತಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!