✍️ ಚಿದಂಬರ ನರೇಂದ್ರ
ಎಲ್ಲ ಬಿಟ್ಟುಬಿಡಲು ಸಿದ್ಧಳಾಗಿದ್ದೆ,
ಎಲ್ಲವನ್ನೂ .
ಅರ್ಧ
ಮನಸ್ಸಿನಿಂದಲೇ
ಮಾಯವಾಗಿಬಿಟ್ಟಿತ್ತು ಪ್ರೇಮ.
ಹಾಗು,
ಯೋಚಿಸಲಿಲ್ಲ ನಾನು ಕೂಡ ಇನ್ನೊಮ್ಮೆ
ಒಂದಾದಮೇಲೊಂದರಂತೆ
ಬೆಂಕಿಗೆ ಕಿತ್ತು ಹಾಕುತ್ತಿದ್ದ
ಸಂಗತಿಗಳ ಬಗ್ಗೆ;
ನನಗೆ ಬೇಕಾದದ್ದು
ಇನ್ನೊಂದಿಷ್ಟು ಹೊತ್ತು ಬೆಂಕಿ ಉರಿದರೆ ಸಾಕು,
ಇನ್ನೂ ಕೆಲವೊಂದು ಕ್ಷಣ
ಆರಿಹೋಗುತ್ತಿರುವ ಕಾವು ಜೊತೆಗಿದ್ದರೆ ಸಾಕು
ಎನ್ನುವ ಸಮಾಧಾನ ಮಾತ್ರ.
ಆದರೆ ಕೊನೆ ಕೊನೆಗೆ
ನಾನು ನಿನ್ನ ಪ್ರೀತಿಸಿದ್ದು ಹೀಗೆ;
ನಡುಗುತ್ತಿದ್ದ ನನ್ನ ತಣ್ಣನೆಯ ದೇಹದೊಂದಿಗೆ,
ಮತ್ತು ಖಾಲೀ ಬೆರಳುಗಳಿಂದ
ಬೂದಿಯೊಳಗಿನ ಕೆಂಡಗಳ ಎಣಿಸುತ್ತ.
Lang Leav / In the End




