Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿರುದ್ಯೋಗ ಪದವೀಧರರಿಗೆ ಭತ್ಯೆ

ನಿರುದ್ಯೋಗ ಪದವೀಧರರಿಗೆ ಭತ್ಯೆ ಕೊಡಿಸಲು ಬದ್ಧ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಭರವಸೆ ನೀಡಿದ್ದಾರೆ.

ನಗರದಲ್ಲಿರುವ ಡಯಟ್ ಕೇಂದ್ರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಮು ಮತ್ತು ಬೆಂಬಲಿಗರು ಪದವೀಧರ ಮತದಾರರಲ್ಲಿ ಮತಯಾಚನೆ ಮಾಡಿದರು. ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಶೀರ್ವಾದ ಮಾಡಿದ್ದು, ಅವರೊಟ್ಟಿಗೆ ಜೆಡಿಎಸ್ ನ ಎಲ್ಲಾ ಮಾಜಿ ಸಚಿವರು, ಶಾಸಕರು ಸೇರಿದಂತೆ ನಾಯಕರು ಬೆಂಬಲ ನೀಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರ ವ್ಯಾಪ್ತಿಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಒಟ್ಟು 1 ಲಕ್ಷ 40 ಸಾವಿರ ಮಂದಿ ಪದವೀಧರರು ಮತಪಟ್ಟಿಗೆ ನೋಂದಣಿ ಮಾಡಿಸಿದ್ದು, ಮತದಾನದ ಹಕ್ಕು ಪಡೆದಿದ್ದಾರೆ. ಎಲ್ಲಾ ಪ್ರಜ್ಞಾವಂತ ಪದವೀಧರ ಮತದಾರರಲ್ಲಿ ಕೇಳಿಕೊಳ್ಳುವುದೇನಂದರೆ ಶಿಕ್ಷಕರು ಮತ್ತು ಪದವೀಧರರ ಸಾಕಷ್ಟು ಸಮಸ್ಯೆಗಳಿಗೆ ಹೋರಾಡುವ ನಮ್ಮನ್ನು ಬೆಂಬಲಿಸಿ, ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ನಾನು ಮೈಸೂರಿನ ಸರ್ಕಾರಿ ನೌಕರರ ಸಂಘದಲ್ಲಿ ನಾಲ್ಕು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬೆಂಗಳೂರು ಕೇಂದ್ರದಲ್ಲಿ ಉಪಾಧ್ಯಕ್ಷನಾಗಿ ನನ್ನ ಸ್ವಂತ ಅಳಿಲು ಸೇವೆ ಸಲ್ಲಿಸಿರುವ ತೃಪ್ತಿ ಇದೆ. 5ನೇ ವೇತನ ಆಯೋಗ ಮತ್ತು 6ನೇ ವೇತನ ಆಯೋಗವು ಮೈಸೂರು ಸಂಘಟನೆಯ ಪ್ರಮುಖ ಪಾತ್ರ ವಹಿಸಿದೆ ಎಂದು ಮಾಹಿತಿ ನೀಡಲಾಗಿದೆ.

ನಾನು ರಾಜ್ಯಾಧ್ಯಕ್ಷನಾಗಿದ್ದ ಸನ್ನಿವೇಶದಲ್ಲಿ ಎಲ್ಲಾ ಸರ್ಕಾರಿ ನೌಕರರಿಂದ ಒಂದು ದಿನದ ದೇಣಿಗೆಯನ್ನು ಸಂಗ್ರಹಿಸಿ, ಮಡಿಕೇರಿ ನೆರೆಸಂತ್ರಸ್ತರಿಗೆ ಒಂದು ನೂರು ಕೋಟಿ ರೂ.ಗಳನ್ನು ನೀಡಿದ್ದೇವೆ ಎಂದು ಪ್ರಕಟಿಸಿದೆ.
ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ನಿರುದ್ಯೋಗ ಭತ್ಯೆ ಯೋಜನೆ ಆರಂಭಿಸಿದ್ದರು.

ಇಂದು ವಕೀಲರಿಗೆ 5 ರಿಂದ 6 ಸಾವಿರ ಭತ್ಯೆ ಬರುತ್ತದೆ, ವೈದ್ಯರಿಗೂ ಭತ್ಯೆ ನೀಡುತ್ತಿದ್ದಾರೆ, ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 10 ಸಾವಿರ ಭತ್ಯೆ ಕೊಡಲು ನೆರವಾಗುತ್ತೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶಿವರಾಮ್ ಮತ್ತು ಪದವೀಧರ ಮತದಾರರು ಮತ್ತು ಬೆಂಬಲಿಗರು ಇಬ್ಬರು.

ಇದನ್ನು ಓದಿ: ಪದವೀಧರ-ಶಿಕ್ಷಕರ ಸಮಸ್ಯೆ ಬಗ್ಗೆ ಅರಿವಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!