Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥನಿಂದ ಲೈಂಗಿಕ ದೌರ್ಜನ್ಯ: ಅಮಿತ್ ಮಾಳವೀಯ ರಾಜೀನಾಮೆಗೆ ಆಗ್ರಹ

ಲೈಂಗಿಕ ದೌರ್ಜನ್ಯ ಆರೋಪವೆಸಗಿದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ಪಕ್ಷದಿಂದ ತಕ್ಷಣ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಾಥೆ ಅವರು, ಆರ್‌ಎಸ್‌ಎಸ್‌ ಸದಸ್ಯರಾಗಿರುವ ಶಾಂತನು ಸಿನ್ಹಾ ಹಾಗೂ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರು ಮಾಳವೀಯ ಅವರ ದುರ್ವರ್ತನೆ ಬಗ್ಗೆ ಆರೋಪಿಸಿರುವ ಬಗ್ಗೆ ಪ್ರಸ್ತಾಪಿಸಿದ್ದರು.

“ವಾಸ್ತವ ಏನೆಂದರೆ ಪ್ರಧಾನಿಯವರು ಪ್ರಮಾಣ ವಚನ ಸ್ವೀಕರಿಸಿ 24 ಗಂಟೆಗಳ ನಂತರ ಬಿಜೆಪಿ ಪ್ರಮುಖ ಕಚೇರಿಯ ಮುಖ್ಯಸ್ಥರೊಬ್ಬರು ಲೈಂಗಿಕ ದೌರ್ಜನ್ಯ ಆರೋಪವೆಸಗುತ್ತಿದ್ದಾರೆ. ಫೈ ಸ್ಟಾರ್‌ ಹೋಟೆಲ್‌ಗಳು ಮಾತ್ರವಲ್ಲ ಪಶ್ಚಿಮ ಬಂಗಾಳದ ಕಚೇರಿಗಳಲ್ಲೂ ಅಮಿತ್‌ ಮಾಳವೀಯ ದೌರ್ಜನ್ಯವೆಸಗಿದ್ದಾರೆ ಎಂದು ಶಾಂತನು ಸಿನ್ಹಾ ಹಾಗೂ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಆರೋಪಿಸಿದ್ದರು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಸುಪ್ರಿಯಾ ಶ್ರೀನಾಥೆ ಒತ್ತಾಯಿಸಿದ್ದಾರೆ.

“ಅಮಿತ್‌ ಮಾಳವೀಯ ಅವರನ್ನು ತಕ್ಷಣ ಆತನ ಹುದ್ದೆಯಿಂದ ಪದಚ್ಯುತಗೊಳಿಸಬೇಕು. ಪ್ರಭಾವಿ ಸ್ಥಾನದಲ್ಲಿರುವ ಅವರು ತಮ್ಮ ಹುದ್ದೆ ಬಳಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಐಟಿ ಸೆಲ್‌ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಸುಪ್ರಿಯಾ ಆಗ್ರಹಿಸಿದ್ದಾರೆ.

ಈ ನಡುವೆ ಅಮಿತ್‌ ಮಾಳವೀಯ ಶಾಂತನು ಸಿನ್ಹಾ ಹಾಗೂ ಬಿಜೆಪಿ ನಾಯಕ ರಾಹುಲ್ ಸಿನ್ಹಾ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!