Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮೂಲ್-ನಂದಿನಿ ವಿಲೀನ ಪ್ರಸ್ತಾವಕ್ಕೆ ಸುನಂದ ಜಯರಾಂ ವಿರೋಧ

ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಗುಜರಾತ್ ನ ಅಮೂಲ್ ಹಾಗೂ ಕರ್ನಾಟಕ ನಂದಿನಿ ವಿಲೀನ ಪ್ರಸ್ತಾವವನ್ನು ರೈತ ಹೋರಾಟಗಾರ್ತಿ ಸುನಂದ ಜಯರಾಂ ಬಲವಾಗಿ ವಿರೋಧಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 15 ಹಾಲು ಒಕ್ಕೂಟಗಳಿದ್ದು, ಇವೆಲ್ಲವು ಲಾಭದಾಯಕವಾಗಿಯೇ ನಡೆಯುತ್ತಿವೆ, ಹೀಗಿರುವಾಗ ಯಾವುದೇ ಬ್ರಾಂಡ್ ಜೊತೆ ನಂದಿನಿಯನ್ನು ವಿಲೀನ ಮಾಡುವುದು ಖಂಡನೀಯ.

ಮಂಡ್ಯ ಹಾಲು ಒಕ್ಕೂಟದ ಅಡಿಯಲ್ಲಿ 1,200 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ, ಇಲ್ಲಿ ಪ್ರತಿದಿನ 80 ರಿಂದ  90 ಲಕ್ಷ  ಲೀಟರ್ ಹಾಲು ಸಂಗ್ರಹವಾಗುತ್ತದೆ. ಇದರಲ್ಲಿ ರೈತ ಮಹಿಳೆಯರ ಶ್ರಮ ಅಪಾರವಾಗಿದೆ. ಇಲ್ಲಿನ ರೈತಾಪಿ ವರ್ಗ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ವಿಲೀನವು ಅಪಾಯಕಾರಿಯಾಗಿದೆ, ಯಾವುದೇ ಕಾರಣಕ್ಕೂ ವಿಲೀನಕ್ಕೆ ಅವಕಾಶ ನೀಡದೇ ನಾಡಿನ ರೈತರು ಒಗ್ಗೂಡಿ ಇಂತಹ ಪ್ರಸ್ತಾವವನ್ನು ವಿರೋಧಿಸಬೇಕಿದೆ ಎಂದು ಪ್ರತಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!