Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಲ್ನಡಿಗೆಯಲ್ಲಿ ಮಾದಪ್ಪನ ಸನ್ನಿಧಿಗೆ ಶಾಸಕ ಅನ್ನದಾನಿ ಪಾದಯಾತ್ರೆ

ಕೊರೊನಾ ತಡೆಗಾಗಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಶಾಸಕ ಅನ್ನದಾನಿ, ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹರಕೆ ತೀರಿಸಲು ಶನಿವಾರ ಜೆಡಿಎಸ್ ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಹೊರಟರು.

ಮಳವಳ್ಳಿಯಿಂದ- ಮಾದಪ್ಪನ ಸನ್ನಿದಿಗೆ ಸುಮಾರು 103 ಕಿ.ಮೀ ಅಗಲಿದ್ದು, ಎರಡು ರಾತ್ರಿ ಹಾಗೂ ಮೂರು ಹಗಲು ಪಾದಯಾತ್ರೆ ನಡೆಯಲಿದೆ. ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕರ ಜೊತೆ‌ ಪಾದಯಾತ್ರೆಯಲ್ಲಿ ಕೈ ಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಅನ್ನದಾನಿ ಮಾತನಾಡಿ, 2019ರಲ್ಲಿ ಕೊರೋನಾ ಬಂದ ಸಂದರ್ಭದಲ್ಲಿ ತಾಲೂಕಿನಲ್ಲಿ ಹಲವು ಜನರು ಅನಾರೋಗ್ಯಕ್ಕೀಡಾ,ಗಿ ಹಲವರು ಸಾವನ್ನಪ್ಪ ಬೇಕಾಯಿತು. ಔಷಧಿ ಇಲ್ಲದ ಸಂದರ್ಭದಲ್ಲಿ ಜನರನ್ನು ನೀನೇ ಕಾಪಾಡಬೇಕು ಎಂದು ನಾನು ಮಲೆ ಮಾದೇಶ್ವರ ಸ್ವಾಮಿಗೆ ಹರಕೆ ಮಾಡಿಕೊಂಡಿದ್ದೆ, ಅದರಂತೆ ಇಂದು ಪಾದಯಾತ್ರೆ ಆರಂಭಿಸಿದ್ದೇನೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪಂಚರತ್ನ ಮಾಡುತ್ತ ಜನರಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಕೇಳುತ್ತಿದ್ದಾರೆ. ಜೆಡಿಎಸ್ ಪಕ್ಷ ಬಂದರೆ ಬಡವರು, ಕಾರ್ಮಿಕರು, ಜನಸಾಮಾನ್ಯರಿಗೆ ಅನುಕೂಲ.ಹಾಗಾಗಿ ಮುಂದಿನ ಬಾರಿಯೂ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮತ್ತೆ ಸಿಎಂ ಮುಖ್ಯಮಂತ್ರಿ ಆಗಿ ರಾಜ್ಯದ ಜನರ ಕಷ್ಟ ಸಂಕಷ್ಟ ಬಗೆಹರಿಸಲಿದ್ದಾರೆ ಎಂದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು,ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಮತ್ತೆ ಮಾದಪ್ಪನ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳಿ ಹರಕೆ ತೀರಿಸುತ್ತೇನೆಂದು ಎಂದು ತಿಳಿಸಿದರು ‌
ಪಾದಯಾತ್ರೆ ಆರಂಭಕ್ಕೂ ಮುನ್ನ ಶಾಸಕರ ಆರೋಗ್ಯ ತಪಾಸಣೆ ನಡೆಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!