Thursday, November 19, 2026

ಪ್ರಾಯೋಗಿಕ ಆವೃತ್ತಿ

ನವತಾರೆಯರ ವಿಭಿನ್ನ ಪ್ರೇಮಕಥೆ ”ಅಪರೂಪ” ಜು.14ರಂದು ಬೆಳ್ಳಿತೆರೆಗೆ

ಕನ್ನಡ ಚಿತ್ರರಂಗಕ್ಕೆ ಹೊಸ ಪರಿಚಯವಾಗಿ ಅಡಿ ಇಡುತ್ತಿರುವ ನಾಯಕ ಸುಘೋಷ್ ಹಾಗೂ ನಾಯಕಿ ಋತಿಕ ಅಭಿನಯದ ವಿಭಿನ್ನ ಪ್ರೇಮಕಥೆ ”ಅಪರೂಪ” ಇದೇ ಜು.14ರಂದು ಬೆಳ್ಳಿತೆರೆಗೆ ಬರಲಿದೆ.

“ಅಪರೂಪ” ಸಿನಿಮಾ ಮೂಲಕ ನಾಯಕರಾಗಿ ಸುಘೋಷ್ ಹಾಗೂ ನಾಯಕಿಯಾಗಿ ಋತಿಕಾ ಶ್ರೀನಿವಾಸ್ ಎಂಬ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಇಬ್ಬರಿಗೂ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ. ಕತೆಗೆ ಪೂರಕವಾಗಿ ನಾಯಕ, ನಾಯಕಿಯನ್ನು ಆಯ್ಕೆ ಮಾಡಲಾಗಿದೆ ಎಂದು  ಎಂದು ನಿರ್ದೇಶಕ ಮಹೇಶ್‌ಬಾಬು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಟಿಯರು ಇಂದು ದೊಡ್ಡ ನಾಯಕಿ ನಟಿಯರಾಗಿ ಬೆಳೆದಿದ್ದಾರೆ. ಇದು ತಮಗೆ ತೃಪ್ತಿ ತಂದಿದೆ. ಹೊಸ ಪ್ರತಿಭೆಗಳು ಬಂದಷ್ಟೂ ಇಂಡಸ್ಟ್ರಿಗೆ ಅನುಕೂಲ ಎಂದರು.

ದೊಡ್ಡ ನಟರಿದ್ದಾಕ್ಷಣ ಸಿನಿಮಾ ಹಿಟ್ ಆಗುವುದಿಲ್ಲ. ಸಣ್ಣ ಬಜೆಟ್‌ನ ಸಿನಿಮಾಗಳು ದೊಡ್ಡ ಸದ್ದು ಮಾಡಿವೆ. ದೊಡ್ಡ ಬಜೆಟ್ ಸಿನಿಮಾಗಳು ಪ್ಲಾಫ್ ಆಗಿವೆ. ಹೀಗಾಗಿ ಸಿನಿಮಾ ಸಕ್ಸಸ್ ಎನ್ನುವುದು ನಾವು ಮಾಡುವುದಲ್ಲ. ಅದಾಗಿಯೇ ಆಗುವುದು. ಜನರು ಇಷ್ಟಪಟ್ಟಾಗ ಸಿನಿಮಾ ಗೆಲ್ಲುತ್ತದೆ. ಸೋಲು-ಗೆಲುವು ಸಹಜ. ಗೆಲುವಿನ ನಂಬಿಕೆ, ವಿಶ್ವಾಸದಿಂದ ನಾವು ಸಿನಿಮಾ ಮಾಡಬೇಕಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ಅಪರೂಪ”ದ ನಟಿ ಋತಿಕಾ ಅವರು ಮೂಲತಃ ಕನ್ನಡತಿಯಾಗಿದ್ದು, ತಮಿಳಿನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡವರು. ನಾಯಕ ಸುಘೋಷ್ ಶ್ರೀರಂಗಪಟ್ಟಣ ತಾಲ್ಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದವರಾಗಿದ್ದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ, ಈ ಜೋಡಿಯನ್ನು ನೆರೆಯ ಮೇಲೆ ನೋಡಿ ಹರಸಿ ಎಂದರು.

3.5 ಕೋಟಿ ರೂ. ಬಜೆಟ್‌ನಲ್ಲಿ ಮದ್ದೂರಿನ ಕೆ.ಆರ್.ಮಹೇಶ್ ನಿರ್ಮಾಣದ ಈ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. 4 ಫೈಟ್‌ಗಳು, 5 ಹಾಡುಗಳಿವೆ ಎಂದು ತಿಳಿಸಿದರು.

ಪುನೀತ್‌ರಾಜ್‌ಕುಮಾರ್ ಅವರು ಒಂದು ಹಾಡನ್ನು ಹಾಡಿದ್ದು, ಅದೇ ಅವರು ಹಾಡಿರುವ ಕೊನೆಯ ಹಾಡು. ಪ್ರಸಿದ್ಧ ಗಾಯಕ ಆರ್ಮಾನ್ ಮಲ್ಲಿಕ್ ಅವರೂ ಒಂದು ಹಾಡನ್ನು ಹಾಡಿದ್ದಾರೆ. ಮನು ಕಲ್ಯಾಡಿ ಅವರು ಸಂಭಾಷಣೆಯೊAದಿಗೆ ಕತೆಯನ್ನೂ ಬರೆದಿದ್ದಾರೆ. ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ನಾಯಕ ನಟ ಸುಘೋಷ್, ನಾಯಕಿ ಋತಿಕಾ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ