Thursday, September 19, 2024

ಪ್ರಾಯೋಗಿಕ ಆವೃತ್ತಿ

Apple ಮತ್ತು Foxcon ಕಂಪನಿಗಳ ಆದೇಶದ ಮೇರೆಗೆ ಬೊಮ್ಮಾಯಿ ಸರ್ಕಾರ ದುಡಿಮೆ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳಿಗೆ ಏರಿಸಿತೇ?

✍️ ಶಿವಸುಂದರ್


ಜಸ್ಟ್ ಆಸ್ಕಿಂಗ್

” Apple ಮತ್ತು Foxcon ಕಂಪನಿಗಳ ಆದೇಶದ ಮೇರೆಗೆ ಬೊಮ್ಮಾಯಿ ಸರ್ಕಾರ ದುಡಿಮೆ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳಿಗೆ ಏರಿಸಿತೇ?

ಬೊಮ್ಮಾಯಿ ಸರ್ಕಾರ ಮೊನ್ನೆ Foxcon ಕಂಪನಿ ಕರ್ನಾಟಕದಲ್ಲಿ ಸಾವಿರಾರು ಕೋಟಿ ಹಣ ಹೂಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಲಿದೆ ಎಂದು ಬೊಗಳೆ ಬಿಟ್ಟಿದ್ದು ನಿಮ್ಮ ನೆನಪಿನಲ್ಲಿರಬಹುದು ..

ಆದರೆ Foxcon ಕಂಪನಿ ತಾನು ತನ್ನ ಆಸಕ್ತಿ ವ್ಯಕ್ತಪಡಿಸಿದ್ದೇನೆಯೇ ಹೊರತು ಗ್ಯಾರಂಟಿ ಯಾಗಿ ಹೇಳಿಲ್ಲ ಎಂದು ಸಮಜಾಯಿಶಿಶಿ ಕೊಟ್ಟಿತು .

ಅದರ ಬೆನ್ನಿಗೆ ಈ ಕಂಪನಿ ಫ್ಯಾಕ್ಟ್ರಿ ಮಾಡಲಿರುವುದು ಕರ್ನಾಟಕದಲ್ಲಲ್ಲ .. ತೆಲಂಗಾಣದಲ್ಲಿ ಎಂಬ ಸುದ್ದಿಗಳು ಬರುತ್ತಿವೆ.

ಆ ಮೂಲಕ ತೆಲಂಗಾಣ ಮತ್ತು ಕರ್ನಾಟಕದ ನಡುವೆ ಸ್ಪರ್ಧೆ ಹಚ್ಚಿರುವ ಈ ದೈತ್ಯ ಕಂಪನಿಗಳು ಯಾವ ರಾಜ್ಯ ತಮಗೆ ಅತ್ಯಂತ ಲಾಭದಾಯಕ ವಾತಾವರಣ ಕಲ್ಪಿಸಿಕೊಡುತ್ತದೋ ಆ ರಾಜ್ಯಕ್ಕೆ ಹೋಗುವ ಲಾಭಕೋರ- ಅಮಾನವೀಯ ಜಾಣತನ ತೋರಿವೆ.

ಈ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದರೆ ಕರ್ನಾಟಕ ಸರ್ಕಾರದ ಉದ್ಯಮ ನೀತಿಗಳು ತೆಲಂಗಾಣ ಸರ್ಕಾರಕ್ಕಿಂತ ಆಕರ್ಷಕವಾಗಬೇಕು…

ಅಮೇರಿಕಾದ Finanacial Times ಮಾರ್ಚ್ 10 ರಂದು ಮಾಡಿರುವ ವರದಿಯ ಪ್ರಕಾರ ಬೊಮ್ಮಾಯಿ ಸರ್ಕಾರ ಫ್ಯಾಕ್ಟರಿಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿಯನ್ನು 9 ಗಂಟೆಇಂದ 12 ಗಂಟೆಗಳಿಗೆ ಏರಿಸಿದ್ದು .. ಮತ್ತು ರಾತ್ರಿ ಪಾಳಿಯಲ್ಲಿ ಮಹಿಳೆಯ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡುವ ಕಾನೂನನ್ನು ಜಾರಿಗೆ ತಂದದ್ದು Apple ಮತ್ತು Foxcon ಕಂಪನಿಗಳ ಒತ್ತಡದ ಮೇರೆಗೆ.. !

ಹೆಚ್ಚಿನ ವಿವರಗಳಿಗೆ ಆಸಕ್ತರು Finanacial Times ಮಾರ್ಚ್ 10 ರ ಈ ವರದಿಯನ್ನು ಗಮನಿಸಬಹುದು :

https://www.ft.com/content/86bf4c20-e95a-4f8e-bd8d-b7bdee3bc3ba

ಈ ಹೊಸ ಕಾಯಿದೆಯ ಪ್ರಕಾರ ಈಗ ಈ ಕಂಪನಿಗಳು ಕಾರ್ಮಿಕರನ್ನು ಎರಡು ಪಟ್ಟು ಸುಲಿಯಬಹುದು.

ಅಷ್ಟು ಮಾತ್ರವಲ್ಲ ಈವರೆಗೆ ಮೂರು ತಿಂಗಳ ಅವಧಿಯಲ್ಲಿ 75 ಗಂಟೆಗಳಷ್ಟು ಮಾತ್ರ Overtime ಮಾಡಿಸಿಕೊಳ್ಳಬಹುದು ಎಂದು ಮೇಲ್ಮಿತಿಯಿತ್ತು. ಆದರೆ ಈಗ ಅದನ್ನು ಎರಡು ಪಟ್ಟು ಹಿಗ್ಗಿಸಿ 145 ಗಂಟೆಗಳಷ್ಟು ದುಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಹಾಗಾದರೆ…

ಈ ಬೊಮ್ಮಾಯಿ ಸರ್ಕಾರ ಅಪ್ಪ-ಅಮ್ಮ ಯಾರು?

ಕರ್ನಾಟಕದ ಜನರೋ? ಅಥವಾ Apple ಮತ್ತು Foxcon ತರಹದ ಬಹುರಾಷ್ಟ್ರೀಯ ಕಂಪನಿಗಳೋ?

ಜಸ್ಟ್ ಆಸ್ಕಿಂಗ್

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!